ಉತ್ತರ ಕನ್ನಡ

ರಾಜ್ಯ ಬಜೆಟ್ 2013

ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಯೋಜನೆಗಳು ಬಂದಿಲ್ಲ. ಶಿಕ್ಷಣ ಮಂತ್ರಿಗಳ ತವರು ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡಬಹುದಿತ್ತು. ಘಟ್ಟದ ಮೇಲಿನ ಪ್ರದೇಶಕ್ಕೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ.
- ಜಿ.ಎಂ. ಹೆಗಡೆ ಮುಳಖಂಡ, ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ

ಬಜೆಟ್ ಬಿಜೆಪಿ ಸರ್ಕಾರದ ಮುಖವಾಣಿ. ಜಿಲ್ಲೆಗೆ ಅನ್ಯಾಯವಾಗಿದೆ. ಕರಾವಳಿಯನ್ನು ಬಿಟ್ಟರೆ ಉಳಿದ ಕಡೆಗೆ ಹೆಚ್ಚಿನ ಮಹತ್ವ ನೀಡಲಾಗಿಲ್ಲ.
- ವಿವೇಕಾನಂದ ವೈದ್ಯ ,ಮಾಜಿ ಶಾಸಕ, ಶಿರಸಿ

ಕೃಷಿಗೆ ನಿರಂತರ ವಿದ್ಯುತ್ ನೀಡುವ ಭರವಸೆ ನೀಡಲಾಗಿದೆ. ಭರವಸೆಯಂತೆ ನಡೆದುಕೊಳ್ಳಬೇಕು. ಜಿಲ್ಲೆಯ ಸೊಪ್ಪಿನ ಬೆಟ್ಟದ ಒಡೆತನದ ಸಮಸ್ಯೆ, ಜೆಲ್ಲಿ, ಮರಳು ಸಮಸ್ಯೆಯ ಕುರಿತು ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ.  
- ಎಂ.ವಿ. ಹೆಗಡೆ ಹುಳಗೋಳ

ಬೋಗಸ್ ಬಜೆಟ್. ಈ ಬಜೆಟ್ ಕಾರ್ಯರೂಪಕ್ಕೆ ಬರುವುದಿಲ್ಲ. ಕಳೆದ ಸಾರಿ ಮಂಡಿಸಿದ ಬಜೆಟ್‌ನಲ್ಲಿ ಶೇ. 20ರಷ್ಟು ಕಾರ್ಯರೂಪಕ್ಕೆ ಬಂದಿಲ್ಲ. ಜನಸಾಮಾನ್ಯರ ಕಣ್ಣೊರೆಸುವ ತಂತ್ರ. ಚುನಾವಣೆ ಹಿನ್ನೆಲೆಯಲ್ಲಿ ಮಂಡಿಸಿರುವ ಬಜೆಟ್ ಇದಾಗಿದೆ.
- ಎ. ರವೀಂದ್ರನಾಥ ನಾಯ್ಕ ಅಧ್ಯಕ್ಷರು, ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ

ಇದು ಮೀನುಗಾರರ ಬಜೆಟ್ ಆಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕನಿಷ್ಠ ರು. 1 ಸಾವಿರ ಕೋಟಿಯನ್ನು ಮೀನುಗಾರಿಕೆಗಾಗಿ ಮೀಸಲಿಡಬೇಕಿತ್ತು. ಆದರೆ ಕಳೆದ ಬಾರಿಗಿಂತ ಬಜೆಟ್‌ನಲ್ಲಿ ಕಡಿಮೆ ಅನುದಾನ ಒದಗಿಸಲಾಗಿದೆ.    
- ಗಣಪತಿ ಮಾಂಗ್ರೆ, ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ

ಬಜೆಟ್‌ನಲ್ಲಿ ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇತ್ತು. ಆದರೆ ಅಂತಹ ಯಾವುದೇ ಮಹತ್ವದ ಘೋಷಣೆ ಇಲ್ಲ. ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಲೂ ಬಜೆಟ್ ಆಶಾದಾಯಕವಾಗಿ ಇಲ್ಲ.
- ಅನು ಕಳಸ, ಸಮಾಜ ಸೇವಕಿ

ಬಜೆಟ್ ರಾಜ್ಯದ ಪ್ರಗತಿಗೆ ಪೂರಕವಾಗಿಲ್ಲ. ಆರ್ಥಿಕ ಬೆಳವಣಿಗೆ ಕುರಿತು ಗಮನ ಹರಿಸಲಾಗಿಲ್ಲ. ಅಲ್ಪಸಂಖ್ಯಾತರಿಗೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿತ್ತು. ಕೃಷಿ ಹಾಗೂ ಮೀನುಗಾರಿಕೆ ಪರವಾಗಿ ಬಜೆಟ್ ಇರಲಿದೆ ಎಂಬ ನಿರೀಕ್ಷೆಯೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ.
- ನಜೀರ ಅಹಮ್ಮದ್ ಯು. ಶೇಖ, ತೆರಿಗೆ ಸಲಹೆಗಾರ

ಹಿಂದುಳಿದವರು ಹಾಗೂ ಬಡವರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕಿತ್ತು. ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗೆ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ಪ್ರಕಟಿಸಬೇಕಿತ್ತು. ಬಜೆಟ್ ನಿರಾಶಾದಾಯಕವಾಗಿದೆ.
- ಗಾಯತ್ರಿ ಗೌಡ ಜಿಪಂ ಮಾಜಿ ಅಧ್ಯಕ್ಷೆ

ಅಂಗನವಾಡಿ ನೌಕರರ ಹಾಗೂ ಸಹಾಯಕರಿಗೆ ಗೌರವ ಧನದಲ್ಲಿ ಹೆಚ್ಚಳ ಮಾಡಲಾಗಿದೆ. ಆದರೆ ನಾವು ಕನಿಷ್ಠ ಕೂಲಿ ನಿಗದಿ ಪಡಿಸಿ ಎಂದು ಒತ್ತಾಯಿಸಿದ್ದೆವು. ಆ ಬೇಡಿಕೆಯನ್ನು ಈಡೇರಿಸಿಲ್ಲ. ಚುನಾವಣೆಯ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ.
- ಯಮುನಾ ಗಾಂವಕರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!