ಉತ್ತರ ಕನ್ನಡ

ಅಕ್ರಮವಾಗಿ ಬಾರ್ಜ್ ಕಟಿಂಗ್

ಹೊನ್ನಾವರ: ಬಂದರು ಪ್ರದೇಶದ ಶರಾವತಿ ನದಿತೀರದಲ್ಲಿ ಲಂಗರು ಹಾಕಿದ್ದ ರು. ಕೋಟ್ಯಂತರ ಮೌಲ್ಯದ ಬಾರ್ಜ್‌ನ್ನು ನೆರೆಯ ಗೋವಾದ ಗುಜರಿ ದಂಧೆ ನಡೆಸುವ ಖಾಸಗಿ ಮಾಲೀಕರ ಕಾರ್ಮಿಕರು ಸ್ಕ್ರ್ಯಾಪ್ ಮಾಡಿ ಸಾಗಣಿಕೆ ಮಾಡುತ್ತಿರುವ ವಿದ್ಯಮಾನಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ ವೇಳೆ ದಿಢೀರ್ ಭೇಟಿಯಿತ್ತ ಭಟ್ಕಳ ಉಪವಿಭಾಗಾಧಿಕಾರಿ ವಿ. ಮನೋಹರ ಅವರು ಪರಿಶೀಲನೆ ನಡೆಸಿ ಈ ವಿದ್ಯಮಾನದಲ್ಲಿ ಸಹಕಾರ ನೀಡಿದ ಬಂದರು ಸಂರಕ್ಷಣಾಧಿಕಾರಿ ಸಹಿತ ಇನ್ನಿತರರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಭಟ್ಕಳ ಉಪವಿಭಾಗಾಧಿಕಾರಿ ವಿ. ಮನೋಹರ, ತಹಸೀಲ್ದಾರ್ ಗಾಯತ್ರಿ ನಾಯಕ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಬಂದರು ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಬಂದರು ಸಂರಕ್ಷಣಾಧಿಕಾರಿ ಜೆ.ಪಿ. ಕಿಣಿ ಇವರಲ್ಲಿ ವಿವರಣೆ ಕೇಳಿದಾಗ ತಬ್ಬಿಬ್ಬುಗೊಂಡು ಈ ಸಂಗತಿ ತಿಳಿದಿಲ್ಲ. ಅವರಿಗೆ ಪರವಾನಿಗೆ ಪಡೆದುಕೊಳ್ಳಲು ಈ ಹಿಂದೆಯೇ ಸೂಚಿಸಿರುವುದಾಗಿ ಜಾರಿಕೊಳ್ಳಲು ಹವಣಿಸಿದರು.
ಸ್ಪಷ್ಟ ವಿವರಗಳಿಲ್ಲ: ಆದರೆ ಸೂಕ್ತ ದಾಖಲಾತಿಗಳನ್ನು ನೀಡುವಂತೆ ಬಾರ್ಜ್ ಕೆಲಸಗಾರರ ಮುಖ್ಯಸ್ಥರಲ್ಲಿ ಉಪವಿಭಾಗಾಧಿಕಾರಿಗಳು ಕೇಳಿದಾಗ, ಸ್ಪಷ್ಟ ವಿವರಗಳಿಲ್ಲದ ಝೆರಾಕ್ಸ್ ಪ್ರತಿಯನ್ನು ನೀಡಿದಾಗ ಅದರಲ್ಲಿ ಈ ಬಾರ್ಜ್ ನೋಂದಣಿಯಾದ  ಮಾಲೀಕರ ಹೆಸರುಗಳು ಮಾತ್ರವಿದ್ದು, ಬಾರ್ಜ್‌ನ್ನು ಕಟ್‌ಮಾಡಿ ಸ್ಕ್ರ್ಯಾಪ್ ಮಾಡುವ ಬಗ್ಗೆ ಅಥವಾ ಬಂದರು ಅಧಿಕಾರಿಯಿಂದಾಗಲಿ, ಜಿಲ್ಲಾಧಿಕಾರಿಗಳಿಂದಾಗಲಿ ಪರವಾನಿಗೆ ಪಡೆದ ಬಗ್ಗೆ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾ ಪತ್ರ ಪಡೆದ ಬಗ್ಗೆ ಯಾವುದೇ ದಾಖಲೆಗಳಿರಲಿಲ್ಲ. ಸಿಪಿಐ ಎಂ. ಮಂಜುನಾಥ ತಮ್ಮ ಸಿಬ್ಬಂದಿಯೊಂದಿಗೆ ಪಂಚನಾಮೆ ನಡೆಸಿ, ಅಕ್ರಮವಾಗಿ ಕೆಲಸ ನಡೆಸಲು ತಂದಿದ್ದ ಪರಿಕರಗಳು, ಕಟ್ಟಿಂಗ್‌ಗೆ ಬಳಸಲು ತಂದಿದ್ದ ಗ್ಯಾಸ್ ಸಿಲಿಂಡರ್‌ಗಳನ್ನು, ಬಾರ್ಜ್‌ನ ಸ್ಕ್ರ್ಯಾಪ್ ಮಾಡಿದ ಬಿಡಿಭಾಗಗಳನ್ನು ಮತ್ತು ಸಾಗಣಿಕೆಗೆ ತಂದಿದ್ದ  ಇನ್ನೊಂದು ಬೋಟ್‌ನ್ನು ವಶವಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಸಂರಕ್ಷಣಾಧಿಕಾರಿಯೇ ಶಾಮೀಲಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್