ಉತ್ತರ ಕನ್ನಡ

ಏಕತೆ ಬೆಳೆಯುತ್ತಿದೆ: ತಪನ್‌ಸೇನ್





ಕನ್ನಡಪ್ರಭ ವಾರ್ತೆ, ಶಿರಸಿ, ಜ. 28
ಕಾರ್ಮಿಕ ಚಳವಳಿಯಲ್ಲಿ ಹಲವಾರು ಸಂಘಟನೆಗಳಿದ್ದರೂ ಕಾರ್ಮಿಕ ಸಂಘಟನೆಗಳ ನಡುವೆ ಐಕ್ಯತೆ ಬೆಳೆಯುತ್ತಿರುವುದು ವಿಶೇಷ ಎಂದು ಸಿಐಟಿಯು ಸಂಘಟನೆ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್‌ಸೇನ್ ಹೇಳಿದರು.
ನಗರದ ಲಿಂಗದಕೋಣ ಭವನದಲ್ಲಿ ನಡೆದ ಸಿಐಟಿಯುನ ಪ್ರತಿನಿಧಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಮಿಕ ರಂಗದಲ್ಲಿ ಹಲವಾರು ಸಂಘಟನೆಗಳು ಇದ್ದರೂ ನಾವು ಒಟ್ಟಾಗುವ ಪ್ರಕ್ರಿಯೆಯಲ್ಲಿದ್ದೇವೆ. ಸಾಮಾನ್ಯ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಒಟ್ಟಾಗಿ ಎದುರಿಸುವ ನಿಟ್ಟಿನಲ್ಲಿ ಪ್ರಗತಿಯಾಗುತ್ತಿದೆ. ದಿನೇ ದಿನೇ ಜಂಟಿ ಹೋರಾಟ ಉನ್ನತ ಹಂತಕ್ಕೆ ಹೋಗುತ್ತಿದೆ ಎಂದರು.
ಫೆ. 20-21ರಂದು ದೇಶಾದಾದ್ಯಂತ ಎರಡು ದಿನಗಳ ಐತಿಹಾಸಿಕ ಮುಷ್ಕರ ನಡೆಯುತ್ತಿದೆ. ಜಾಗತೀಕರಣ ಮತ್ತು ಉದಾರೀಕರಣದ ಭರದಲ್ಲಿ ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಗಾಳಿಗೆ ತೂರಲಾಗುತ್ತಿದೆ. ಕಾರ್ಮಿಕರನ್ನು ಬೀದಿಪಾಲು ಮಾಡುವ ದೇಶವನ್ನು ದಿವಾಳಿ ಎಬ್ಬಿಸುವ ನೀತಿಗಳ ವಿರುದ್ಧ ಸಾರ್ವಜನಿಕರು ಏನೇ ಹೋರಾಟ ಮಾಡಿದರೂ ಜನರು ಏನೇ ಹೇಳಿದರೂ ಕೇಂದ್ರದ ಯುಪಿಎ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಸಾರ್ವಜನಿಕರು ಅಭಿಪ್ರಾಯಕ್ಕೆ ಪ್ರತಿರೋಧ ಒಡ್ಡಿದರೂ ಆಳುವ ಸರ್ಕಾರಗಳು ನಿರ್ಲಕ್ಷ್ಯಿಸುವುದು ಹೆಚ್ಚುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕರ ಎಂದು ತಪನ್‌ಸೇನ್ ಎಚ್ಚರಿಸಿದರು.
ಏಕತೆ ಕಾರ್ಖಾನೆ ಮಟ್ಟದಲ್ಲಿರಲಿ: ಬಿಎಂಎಸ್ ಸಂಘಟನೆಯ ರಾಜ್ಯ ಮುಖಂಡ ಸೂರ್ಯನಾರಾಯಣ ರಾವ್ ಸಮ್ಮೇಳನಕ್ಕೆ ಶುಭಕೋರಿ ಮಾತನಾಡಿದರು. ಎಐಟಿಯುಸಿ ಸಂಘಟನೆ ಪರವಾಗಿ ರಾಜ್ಯ ಮುಖಂಡ ವಿಜಯ ಭಾಸ್ಕರ್ ಮಾತನಾಡಿ, ಐಕ್ಯ ಚಳವಳಿಗೆ ಆದ್ಯತೆ ನೀಡಿರುವುದಕ್ಕಾಗಿ ಸಿಐಟಿಯು ಸಂಘಟನೆಗೆ ಅಭಿನಂದನೆ ಸಲ್ಲಿಸಿ ನಮ್ಮ ಮುಂದಿರುವ ಸವಾಲು ರಾಷ್ಟ್ರಮಟ್ಟದಲ್ಲಿ ಮೂಡಿರುವ ಐಕ್ಯತೆ ಕಾರ್ಖಾನೆ ಮಟ್ಟದಲ್ಲಿ ಮೂಡಬೇಕಿದೆ. ಜಂಟಿ ಕಾರ್ಮಿಕರ ಸಂಘಟನೆ (ಜೆಸಿಟಿಯು) ಮೂಲಕ ಮಹತ್ವದ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಸೈದ್ಧಾಂತಿಕ ವ್ಯತ್ಯಾಸಗಳು ಹೋರಾಟದ ಯುದ್ಧ ಭೂಮಿಯಲ್ಲಿ ಕರಗಿ ಹೋಗುತ್ತವೆ. ಕಾರ್ಮಿಕ ಚಳವಳಿ ದೇಶದ ಶಾಶ್ವತ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಎಂದರು.
ಎಐಯುಟಿಯುಸಿ ಪರವಾಗಿ ಪ್ರಕಾಶ್ ಅವರು ಮಾತನಾಡಿ, ಸಹಸ್ರಾರು ಸಂಖ್ಯೆಯಲ್ಲಿ ಶಿರಶಿಯಂತಹ ಒಂದು ಊರಿನಲ್ಲಿ ಕಾರ್ಮಿಕರು ಹರಿದು ಬಂದಿರುವುದು ಸಂತೋಷದ ವಿಷಯ. ಜಂಟಿ ಹೋರಾಟ 19 ವರ್ಷಗಳಿಂದ ನಡೆದಿದೆ. ಚಳವಳಿ ಇಂದು ಪ್ರಚಾರದ ಹಂತದಲ್ಲಿ ಇಲ್ಲ. ತೀವ್ರ ಪ್ರತಿರೋಧಾತ್ಮಕ ಚಳವಳಿಯ ಹಂತ ಇದು ಇದನ್ನು ಯಶಸ್ವಿ ಮಾಡೋಣ ಎಂದರು. ವಿಜೆಕೆ ನಾಯರ್ ಸಮಾರಂಭದ ಅಧ್ಯಕ್ಷಿಯ ಭಾಷಣ ಮಾಡಿದರು. ಸಂಘಟನೆಯ ವಿವಿಧ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್