ಉತ್ತರ ಕನ್ನಡ

ಧರ್ಮದ ಮೂಲಕ ಜಾಗೃತಿ ಸೂಕ್ತ



ಮುಂಡಗೋಡ:  ಧರ್ಮದ ಮೂಲಕ ಜಾಗೃತಿ ಮೂಡಿಸುವುದು ಸೂಕ್ತ. ಸಾತ್ವಿಕ ಜಗತ್ತು ನಿರ್ಮಾಣವಾಗಬೇಕಿದ್ದರೆ ಧರ್ಮ ಅಗತ್ಯವಾಗಿದೆ. ಧಾರ್ಮಿಕ ಭಾವನೆ ಹೊಂದಿದವರು ದುರ್ವ್ಯಸನಿಗಳಾಗದೆ, ಉತ್ತಮ ಸಂಸ್ಕಾರ ಹೊಂದಿರುತ್ತಾರೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಹೇಳಿದರು.
ಶ್ರೀಗಳು ಬುಧವಾರ ವಿವೇಕಾನಂದ ಬಯಲು ರಂಗಮಂಟಪದಲ್ಲಿ ದನಗರಗೌಳಿ, ಬಂಜಾರಾ, ಮರಾಠಿ ಸಮುದಾಯದವರ ಧರ್ಮ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಭಾರತ ದೇಶದ ಧಾರ್ಮಿಕ ಪರಂಪರೆ ವಿಶ್ವದಲ್ಲಿಯೇ ಶ್ರೇಷ್ಠವಾಗಿದೆ. ಇನ್ನಿತರೇ ಗ್ರಂಥಗಳು ಕೇವಲ 2 ಸಾವಿರ ವರ್ಷದ ಈಚೆ ತಲೆ ಎತ್ತಿವೆ. ಆದರೆ ನಮ್ಮ ಗ್ರಂಥಕ್ಕೆ ಸುಮಾರು 7 ಸಾವಿರ ವರ್ಷ ಇತಿಹಾಸವಿದೆ. ಅಂದಿನಿಂದಲೂ ನಮ್ಮ ದೇಶ ಉತ್ತಮ ನಾಗರಿಕತೆ, ಸಂಸ್ಕೃತಿ ಹೊಂದಿದೆ. ನಮ್ಮದೇ ಆದ ದೇವರಿದ್ದಾರೆ, ಧರ್ಮ ಗುರುಗಳಿದ್ದಾರೆ. ಧರ್ಮದ ಬಗ್ಗೆ ನಿಷ್ಠೆ ಹಾಗೂ ಅಭಿಮಾನ ಬೆಳೆಸಿಕೊಳ್ಳಬೇಕು. ಅನ್ಯರು ನಮ್ಮ ಧರ್ಮವನ್ನು ದುರ್ಬಲಗೊಳಿಸಲು ಸವಾರಿ ನಡೆಸುವುದು ಸಹಜ. ವನವಾಸಿಗರಲ್ಲಿ ಅಪಾರವಾದ ಶಕ್ತಿ ಇದೆ. ಅವರು ಪ್ರಯತ್ನ ಮಾಡಿದರೆ ಯಾವ ಕ್ಷೇತ್ರದಲ್ಲಿಯು ಶಕ್ತಿ ಪ್ರದರ್ಶನ ಮಾಡಬಲ್ಲರು. ವನವಾಸಿ ಜನಾಂಗಕ್ಕೆ ಶಿಕ್ಷಣದ ಅಗತ್ಯವಿದೆ. ವನವಾಸಿಗಳು ಧಾರ್ಮಿಕ ಮನೋಭಾವ ಹೆಚ್ಚಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯ. ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಲ್ಲಿ ದನಗರ ಗೌಳಿ ಜನಾಂಗದ ರಕ್ಷಣೆಯಾಗಲಿದ್ದು, ಧರ್ಮ ರಕ್ಷಣೆಯಲ್ಲಿ ಗೋಹತ್ಯೆ ನಿಷೇಧ ಕೂಡ ಒಂದಾಗಲಿದೆ. ಈ ಬಗ್ಗೆ ಎಲ್ಲರು ಸೇರಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಶ್ರೀಗಳು ಹೇಳಿದರು.
ಜಾತಿ ಧರ್ಮಕ್ಕೆ ಮಾರಕ: ಅತ್ತಿವೇರಿ ಬಸವಧಾಮದ ಶ್ರೀಮಾತೆ ಬಸವೇಶ್ವರಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಹಿಂದೂ ಧರ್ಮದಲ್ಲಿ ಜಾತಿ ಎಂಬುವುದು ಕ್ಯಾನ್ಸರ್ ರೋಗವಿದ್ದಂತೆ. ಜಾತಿ-ಭೇದ ಧರ್ಮಕ್ಕೆ ಮಾರಕವಾಗುತ್ತಿದೆ. ಭಗವಂತನ ದೃಷ್ಟಿಯಲ್ಲಿ ಮೇಲುಕೀಳು ಎಂಬುವುದಿಲ್ಲ. ಬಟ್ಟೆಗಳನ್ನು ಕತ್ತರಿಸಿ ಛಿದ್ರ ಛಿದ್ರ ಮಾಡುವ ಕತ್ತರಿ ಜಾತಿಯಾದರೆ, ಕೂಡಿಸಿ ಹೊಲೆಯುವ ಚಿಕ್ಕ ಸೂಜಿ ಧರ್ಮವಿದ್ದಂತೆ ಎಂದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಂಗಮೇಶ ಬಿದರಿ ಮಾತನಾಡಿ, ಅತಿಕ್ರಮಣ ಹೆಸರಿನಲ್ಲಿ ಸರ್ಕಾರ ವನವಾಸಿಗರಿಗೆ ಹಾಲಾಹಲ ಮಾಡುತ್ತಿದೆ ಎಂದು ಆರೋಪಿಸಿದರು.
ಹನುಮಾಪುರ ಕಾಳಿಕಾ ಮಠದ ಶ್ರೀ ಸದಾನಂದ ಶಿವಾಚಾರ್ಯ ಸ್ವಾಮಿ, ಪ್ರಾಂತ ಪರಿಯೋಜನಾ ಪ್ರಮುಖ ಧರ್ಮ ಜಾಗರಣಾದ ಬಾಬು ರಾಜೇಂದ್ರ ನಾಯ್ಕ, ಉತ್ತರ ಪ್ರಾಂತ ಧರ್ಮ ಜಾಗೃತಿ ಸಂಯೋಜಕ ಗ.ರಾ. ಸುರೇಶ ಮಾತನಾಡಿದರು. ವನವಾಸಿ ಕಲ್ಯಾಣದ ಮುಖ್ಯಸ್ಥ ಶಾಂತಾರಾಮ ಸಿದ್ದಿ, ನಾಗಭೂಷಣ, ಎಂ.ಸಿ. ಹೆಗಡೆ, ಕೃಷ್ಣಮೂರ್ತಿ, ಯಮ್ಮು ಠಕ್ಕು ವರಕ, ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಮುಖ್ಯಸ್ಥ ಜಯರಾಮ ಬೊಳ್ಳಾಜೆ, ಉದ್ಯಮಿ ಅಶೋಕ ಪಾಲೇಕರ, ಲಕ್ಷ್ಮಣ ಚಂದಾಪುರ, ವಿಠ್ಠು ಸೋನು ದೊಯಿಪೊಡೆ, ತಾಪಂ ಅಧ್ಯಕ್ಷೆ ಕೊಂಡುಬಾಯಿ ಜೋರೆ ಇದ್ದರು. ರವೀಂದ್ರ ಹೆಡಳ್ಳಿ ನಿರೂಪಿಸಿದರು. ಸುರೇಖಾ ಗಾಯತೊಂಡೆ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್