ಉತ್ತರ ಕನ್ನಡ

ವಾಣಿಜ್ಯೀಕರಣದಿಂದ ಶಾಂತಿ, ನೆಮ್ಮದಿ ದೂರ: ಸಾಹಿತಿ ಕಾಳೇಗೌಡ ನಾಗವಾರ

ಯಲ್ಲಾಪುರ:  ಆಧುನಿಕ ಜೀವನಾಕರ್ಷಣೆಗೆ ಬಲಿಯಾಗುತ್ತಿರುವ ಯುವ ಜನಾಂಗದ ಮನಸ್ಸುಗಳು ವಾಣಿಜ್ಯೀಕರಣಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ನೀಡಲಾರಂಭಿಸಿದ್ದು, ಸಾಮಾಜಿಕ ಶಾಂತಿ, ಸಮಾಧಾನ, ತಾಳ್ಮೆಗಳು ಕಣ್ಮರೆಯಾಗುವ ದುರಂತ ಸಂಭವಿಸಿದೆ ಎಂದು ನಿವೃತ್ತ ಅಧ್ಯಾಪಕ, ಚಿಂತನಶೀಲ ಸಾಹಿತಿ ಕಾಳೇಗೌಡ ನಾಗವಾರ ಹೇಳಿದರು. ಸೋಮವಾರ ಬೆಳಗ್ಗೆ ಪಟ್ಟಣದ ವೈಟಿಎಸ್ಎಸ್ ಪಪೂ ಕಾಲೇಜಿನಲ್ಲಿ ರಚನೆಗೊಂಡ ವಿದ್ಯಾರ್ಥಿ ಸಂಸತ್ತು ಹಾಗೂ ಎನ್ಎಸ್ಎಸ್ ಕಾರ್ಯಚಟುವಟಿಕೆ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೈಟಿಎಸ್ಎಸ್ ಅಧ್ಯಕ್ಷ ಗಜಾನನ ಭಟ್ಟ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಮಾತನಾಡಿದರು. ಎನ್ಎಸ್ಎಸ್ ಸಂಯೋಜನಾಧಿಕಾರಿ ಮನೋಹರ ಶಾನಭಾಗ ವೇದಿಕೆಯಲ್ಲಿದ್ದರು. ಸಹನಾ ಭಟ್ಟ, ಸೌಮ್ಯಾ ಕೋಟೆಮನೆ, ಪ್ರಜ್ಞಾ ಹೆಗಡೆ, ಕೀರ್ತಿ ಭಟ್ಟ ಪ್ರಾರ್ಥಿಸಿದರು. ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಸ್ವಾಗತಿಸಿದರು. ಎನ್ಎಸ್ಎಸ್ ಘಟಕವನ್ನು ಶಿಕ್ಷಕ ಎನ್.ಎಸ್. ಭಟ್ಟ ವಿದ್ಯಾರ್ಥಿ ಸಂಸತ್ತನ್ನು ಉಪನ್ಯಾಸಕ ಜೆ.ಎನ್. ಗುನಗಾ ಪರಿಚಯಿಸಿದರು. ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಶಕುಂತಲಾ ಸಿಂದೊಳ್ಳಿ ಹಾಗೂ ಗಂಗಾ ನಾಯಕ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ವಿನೋದ ಭಟ್ಟ ನಿರೂಪಿಸಿದರು. ಉಪಪ್ರಾಂಶುಪಾಲರಾದ ಲಕ್ಷ್ಮೀ ಗಾಂವ್ಕರ್  ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

'ನಾನು ಯಂಗ್ ಹೃತಿಕ್ ರೋಷನ್ ತರಹ ಕಾಣುತ್ತೇನೆ ಅಂತ...': ಕಂಗನಾಗೆ CJP ವಕ್ತಾರ ಸೌರವ್ ದಾಸ್ ತಪರಾಕಿ!

ಕಾವೇರಿ ಕಿಚ್ಚಿನ ಮಧ್ಯೆ ಮಂಡ್ಯದಲ್ಲಿ ಘೋರ ದುರಂತ: ರೈತ ದಂಪತಿ ನೇಣಿಗೆ ಶರಣು; ಸರ್ಕಾರ ಸಮಸ್ಯೆ ಪರಿಹರಿಸಬೇಕು - ಬಿಜೆಪಿ ಆಗ್ರಹ

30 ದಿನ ಜೈಲು ಶಿಕ್ಷೆ ಆದ್ರೆ ಸಿಎಂ, ಪ್ರಧಾನಿ ಹುದ್ದೆ ಕಳೆದುಕೊಳ್ಳಬೇಕೇ?; ಮಹತ್ವದ ಮಸೂದೆ ಪರಿಶೀಲನೆಗೆ ಸಂಸತ್ ಸಮಿತಿಗೆ ಮತ್ತಷ್ಟು ಕಾಲಾವಕಾಶ

ಕಾವೇರಿ: ಕರ್ನಾಟಕಕ್ಕೆ ಅನ್ಯಾಯಗಳ ಪರಂಪರೆ (ನೇರ ನೋಟ)