ಕಾರವಾರ: ನೌಕಾನೆಲೆ ವತಿಯಿಂದ ಜು. 18ರಂದು ಲಘು ಶಸ್ತ್ರಾಸ್ತ್ರಗಳ ಕವಾಯತು ನಡೆಸಲಾಗುತ್ತಿದ್ದು, ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ನೌಕಾನೆಲೆಯ ಉತ್ತರ ಬ್ರೇಕ್ವಾಟರ್ ದ್ವಾರದ ಬಳಿ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಕವಾಯತು ನಡೆಸಲಾಗುವುದು. ಈ ಅವಧಿಯಲ್ಲಿ ಮೀನುಗಾರರು ಅಂಜದೀವ್ ಮತ್ತು ಕಾಮತ್ ಬೀಚ್ ವ್ಯಾಪ್ತಿಯಿಂದ ಎರಡು ನಾಟಿಕಲ್ ಮೈಲು ದೂರದಲ್ಲಿರುವಂತೆ ಕೋರಲಾಗಿದೆ.
ಉಪನ್ಯಾಸ ಕಾರ್ಯಾಗಾರ
ಕುಮಟಾ: ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ವೃತ್ತಿಶಿಕ್ಷಣ ಹಾಗೂ ಉದ್ಯೋಗಾವಕಾಶ ಘಟಕದ ಆಶ್ರಯದಲ್ಲಿ ಬಿ.ಕಾಂ. ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಸಿಸ್ಟಂಟ್ ಜನರಲ್ ಮ್ಯಾನೇಜರ ಅಸಿಸ್ ಗೋನ್ಸಾಲ್ವೇಸ ಶೈಕ್ಷಣಿಕ ಸಾಲದ ಮಾಹಿತಿ ನೀಡಿದರು. ಡಾ. ಎಸ್.ವಿ. ಶೇಣ್ವಿ ಸ್ವಾಗತಿಸಿ, ಪರಿಚಯಿಸಿದರು. ಪ್ರೊ. ಎಲಿಜಬೆತ್ ಡಿಸೋಜಾ ವಂದಿಸಿದರು.