ಉತ್ತರ ಕನ್ನಡ

ತಿಂಗಳಿಂದ ವಿದ್ಯುತ್ ಇಲ್ಲ: ಆಕ್ರೋಶ

ಸಿದ್ದಾಪುರ: ತಿಂಗಳಿಗೂ ಅಧಿಕ ಕಾಲದಿಂದ ತಾಲೂಕಿನ ದೊಡ್ಮನೆ, ಕ್ಯಾದಗಿ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲ. ಈ ಬಗ್ಗೆ ಹೆಸ್ಕಾಂ ಏಕೆ ನಿರ್ಲಕ್ಷ ತೋರಿಸುತ್ತಿದೆ? ಇಲ್ಲಿನ ಸಿಬ್ಬಂದಿಗೆ ಇರುವ ತೊಡಕುಗಳೇನು? ಕೂಡಲೇ ಸಮರ್ಪಕವಾಗಿ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಿ, ಇಲ್ಲವಾದರೆ ಹೆಸ್ಕಾಂ ಮೇಲಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಎಂದು ಸಾರ್ವಜನಿಕರು ಬಿಳಗಿ ಹೆಸ್ಕಾಂ ಕಚೇರಿ ಅಧಿಕಾರಿಗಳನ್ನು ಆಗ್ರಹಿಸಿದರು.
ಸೋಮವಾರ ಬಿಳಗಿಯಲ್ಲಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ಟಿ. ಹೆಗಡೆಯವರ ಬಳಿ ತಮಗಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ದೊಡ್ಮನೆ ಭಾಗದ ಬಿ.ಜೆ. ಹೆಗಡೆ, ಮುಖ್ಯ ವಿದ್ಯುತ್ ಮಾರ್ಗದ ನಿರ್ವಹಣೆ ಸರಿಯಾಗಿಲ್ಲ ಎಂದರು.
ಕ್ಯಾದಗಿ ಗ್ರಾಪಂ ಸದಸ್ಯ ರಾಮಕೃಷ್ಣ ನಾಯ್ಕ ದೊಡ್ಮನೆ, 46 ದಿನಗಳಲ್ಲಿ ಕೇವಲ 7 ದಿನ ಮಾತ್ರ ವಿದ್ಯುತ್ ಇತ್ತು. ಕೆಲವು ದಿನಗಳ ಹಿಂದೆ ನಾವು ಪ್ರತಿಭಟನೆ ಮಾಡಿ ನಮ್ಮ ಸಮಸ್ಯೆಗಳನ್ನು ಹೇಳಿದ್ದೆವು. ಪ್ರತಿಭಟನೆ ಮಾಡುವ ದಿನ, ಅದಾಗಿ ಒಂದೆರಡು ದಿನ ವಿದ್ಯುತ್ ಇರುತ್ತದೆ. ನಂತರ ಇರೋದಿಲ್ಲ. ಯಾವಾಗ ಕೇಳಿದರೂ ಇನ್ಸುಲೇಟರ್ ಸಮಸ್ಯೆ ಎನ್ನಲಾಗುತ್ತದೆ. ಅದು ಮೊದಲಿನಿಂದಲೂ ಇರುವ ಸಮಸ್ಯೆ ಎಂದರು.
ಮೇಲಧಿಕಾರಿ ಕರೆಸಿ: ಬಿಳಗಿ ಗ್ರಾಪಂ ಸದಸ್ಯ ಪರಮ ಗೌಡ ಕಟ್ಟೆಕೈ, ನಿಮ್ಮಿಂದ ಸರಿಪಡಿಸಲು ಆಗದಿದ್ದರೆ ನಿಮ್ಮ ಮೇಲಧಿಕಾರಿಗಳನ್ನು ಇಲ್ಲಿಗೆ ಕರೆಯಿಸಿ ಎಂದು ಗಟ್ಟಿಧ್ವನಿಯಲ್ಲಿ ಆಗ್ರಹಿಸಿದರು. ತಾಲೂಕಿನಲ್ಲಿ ಎಲ್ಲೆಡೆ ಸಿಬ್ಬಂದಿ ಸಮಸ್ಯೆ ಇದೆ. ಆದರೆ ಅದನ್ನು ಭರ್ತಿ ಮಾಡಲು, ದಿನಗೂಲಿ ನೌಕರರನ್ನು ನೇಮಕ ಮಾಡಿಕೊಳ್ಳಲು ನನಗೆ ಅಧಿಕಾರವಿಲ್ಲ. ಇಲ್ಲಿನ ಸಮಸ್ಯೆಗಳ ಕುರಿತು ಮೇಲಧಿಕಾರಿಗಳ ಬಳಿ ಅರಿಕೆ ಮಾಡಿದ್ದೇನೆ ಎಂದು ಸ.ಕಾ.ಇ. ಡಿ.ಟಿ. ಹೆಗಡೆ ಸಾರ್ವಜನಿಕರಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕರು ನಿಮ್ಮಿಂದ ಸಮಸ್ಯೆ ನೀಗಿಸಲು ಸಾಧ್ಯವಾಗದಿದ್ದರೆ ನಿಮ್ಮ ಮೇಲಧಿಕಾರಿಗಳನ್ನು ಇಲ್ಲಿಗೆ ಕರೆಯಿಸಿ, ಅವರ ಬಳಿಯೇ ನಮ್ಮ ಸಮಸ್ಯೆ ಹೇಳುತ್ತೇವೆ ಎಂದು ಆಗ್ರಹಿಸಿದರು. ಶೀಘ್ರವಾಗಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಡಿ.ಟಿ. ಹೆಗಡೆ ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಎಚ್.ಡಿ. ಗೌಡ ಊಡಳ್ಳಿ, ಶಿವಾನಂದ ಶಾಸ್ತ್ರಿ, ವೀಣಾ ಹೆಗಡೆ, ಬಿ.ಜಿ. ಹೆಗಡೆ ಪಾಲ್ಗೊಂಡಿದ್ದರು. ಆರಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್