ಎಂ.ಕೆ. ಸುದರ್ಶನ, ಚಾಮರಾಜಪೇಟೆ, ಬೆಂಗಳೂರು
ನಿಮ್ಮ ಮುಂದೆ ನರ್ಸ್ ಜಯಲಕ್ಷ್ಮಿ ನಿಂತರೆ ಏನ್ಮಾಡ್ತೀರಾ?
ಪಕ್ಕಕ್ಕೆ ಸರಿದು ದಾರಿ ಮಾಡಿಕೊಡುತ್ತೇನೆ!
ಫೈಜ್ನಟ್ರಾಜ್, ಸಂತೇಬೆನ್ನೂರು
ನೀವು ಬಿಗ್‌ಬಾಸ್‌ನಲ್ಲಿ ಭಾಗವಹಿಸ್ತೀರಂತೆ, ನಿಜಾನಾ?
ನಾನು ಭಾಗವಹಿಸುವುದಿಲ್ಲ. ಹಾಗೆ ವರ್ತಿಸಲು ಪ್ರಯತ್ನಿಸುವೆ!
ಚಂದ್ರಶೇಖರ ಪಾತಾಜೆ, ತುಮಕೂರು
ಪ್ರೇಮಿಗಳು ಚುನಾವಣೆಯಲ್ಲಿ ಸ್ಪರ್ಧಿಸಬಹುದಾ?
ನರ್ಸ್ ಜಯಲಕ್ಷ್ಮಿ ಸ್ಪರ್ಧಿಸುತ್ತೇನೆ ಅಂದಾಗಲೇ ನಿನಗೆ ಗೊತ್ತಾಗಬೇಕಿತ್ತು!
ಪ್ರವೀಣಭಾರತಿ, ಚಿತ್ರದುರ್ಗ
ನೀವು ಇನ್ನೂ ಯಾಕೆ ಮೀಸೆ ಬೋಳಿಸಿಲ್ಲ?
ಜಿರಳೆಗಳಿಗೂ ಅದು ಇರುವಾಗ ನಾನ್ಯಾಕೆ ಬೋಳಿಸಲಿ?
ಸುಮಾ ಎಂ.ಮೂರ್ತಿ, ಮೈಸೂರು
ನರ್ಸ್ ಜಯಲಕ್ಷ್ಮಿಯನ್ನು ಆ್ಯಂಕರ್ ಆಗಿ ಯಾಕೆ ನೇಮಿಸಬಾರದು?
'ಕಿರುತೆರೆ'ಗೆ ಅಡ್ಜಸ್ಟ್ ಆಗೊಲ್ಲ ಅವರು!
- ಬಾಣಭಟ್ಟ