ಪಾಠ
ನಿದ್ರಾಹೀನತೆಯ ಔಷಧಿ
ವಿದ್ಯಾರ್ಥಿಗಳ ಕಿವಿಗಳಿಗೆ ತೂತುಗಳಿರುವುದೇ ಇದನ್ನು ಕೇಳಲು
ಕೇಳಿದರೆಷ್ಟು ಬಿಟ್ಟರೆಷ್ಟು ಎಂದೆನಿಸುವ, ಪರೀಕ್ಷೆಯ ನಂತರ ಕೇಳಬೇಕಿತ್ತಲ್ಲ ಎನಿಸುವಂಥದ್ದು
ಮಾತಿನ ಸ್ಫೋಟ
ವಿದ್ಯಾರ್ಥಿಗಳ ಪಾಲಿಗಿನ ಕಾಟ
ಅಧ್ಯಾಪಕ ಪೀಠ ಏರಿದವರ ಡ್ಯೂಟಿ
ಇದರಲ್ಲಿ ಮನೆ ಪಾಠ, ಶಾಲೆ ಪಾಠ ಎಂದು ಎರಡು ವಿಧ
ಶಾಲೆಯಲ್ಲಿ ಅರ್ಥವಾಗದಂತೆ ಪಾಠ ಮಾಡುವುದರ ಗುಟ್ಟೇನೆಂದರೆ ಮನೆ ಪಾಠಕ್ಕೆ ವಿದ್ಯಾರ್ಥಿಗಳು ಬರಲಿ ಎಂಬುದು..
ಯಾವತ್ತೂ ವಟವಟ ಎನ್ನುವವರ ಪ್ರತಿ ಮಾತೂ ಪಾಠವೇ
ಅಧ್ಯಯನ-ಅಧ್ಯಾಪನದ ಮಧ್ಯವರ್ತಿ
ಪಾಠ ಕೇಳುವುದು ಎಲ್ಲಿಯೂ ಕಡ್ಡಾಯವಲ್ಲ. ಕೇವಲ ಉಪಸ್ಥಿತಿ ಮಾತ್ರ ಕಡ್ಡಾಯ
ಪಟಪಟನೇ ಅರಳು ಹುರಿದಂತೆ ಮಾತನಾಡಿ ನಿದ್ದೆ ತರಿಸುವ ಮಾಧ್ಯಮ
ವಿದ್ಯಾರ್ಥಿಯ ತಲೆಯೆಂಬ ಬೋರ್ಗಲ್ಲ ಮೇಲೆ ಅಧ್ಯಾಪಕ ಸುರಿಸುವ ಮಳೆ
ಇದೊಂಥರ ಚೂಪಲ್ಲದ ಮೊಳೆ. ತಿವಿಯುವುದು ಮತ್ತು ಚುಚ್ಚುವುದು
ಪಾಠಕ್ಕಿಂತ ಕೆಲವೊಮ್ಮೆ ಅದರಲ್ಲಿ ಹಾಕಿರುವ ಫೋಟೋವೇ ಚೆನ್ನಾಗಿರುತ್ತೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com