ಬಳೆ
ಹಳೆ ಕಾಲದ ಸ್ತ್ರೀಯರ ಕೈ ಲಕ್ಷಣ
ಈಗಿನ ಕಾಲದಲ್ಲಿ 'ನಾನೇನು ಕೈಗೆ ಬಳೆ ತೊಟ್ಟಿಲ್ಲ' ಎಂದು ಸ್ತ್ರೀಯರೂ ಧೈರ್ಯವಾಗಿ ಹೇಳಬಲ್ಲರು
ಗಾಜಿನದ್ದಾದರೆ ಒಳ್ಳೆ ಕಳೆ
ಕಣ ಕಣ ಶಬ್ದ ಹೊರಡಿಸುವ ಕಂಕಣ
ಇದು ಸ್ತ್ರೀತ್ವದ ಹೆಗ್ಗುರುತು. ಸ್ತ್ರೀತ್ವವೇ ಕಳೆದು ಹೋಗುತ್ತಿರುವುದರಿಂದ ಅದರ ಹೆಗ್ಗುರುತೂ ಮಾಯಾವಾಗುತ್ತಿದೆ
ಭಾರತೀಯ ಮಹಿಳೆಯ ಪ್ರಮುಖ ಆಭರಣ. ಇಂಡಿಯಾದ ಲೇಡಿಸ್‌ಗಳಿಗಿದು ಹೊರೆ
ಬಳೆ ಇಲ್ಲದ ಸ್ತ್ರೀಯ ಕೈಯ್ಯೆಲ್ಲ ಬೋಳು
ಪೆಟ್ಟಿಗೆಯಲ್ಲಿ ಎಷ್ಟಿದ್ದರೂ...ಬೇಕು ಇನ್ನೊಂದಿಷ್ಟು
ಸಂಸ್ಕೃತಿಯ ವಾಹಕನಂತಿದ್ದ ಬಳೆಗಾರ ಮನೆಗೆ ಬರುವುದು ನಿಂತ ಮೇಲೆ ಇದು ಕೂಡ ಅಸ್ತಿತ್ವ ಕಳೆದುಕೊಂಡಿದೆ
ಚಿನ್ನದ ಬಳೆ ತೊಟ್ಟವರದ್ದು ಸ್ವಲ್ಪ ಹೆಚ್ಚೇ ಹೆಚ್ಚು ಸದ್ದು
ಚೆಂದದ ಬಳೆ ತೊಟ್ಟ ಮಾತ್ರಕ್ಕೆ ಬಾಳು ಚೆಂದವಿರಬೇಕೆಂದಿಲ್ಲ
ಗಾಜಿನ ಬಳೆಯ ಗೋಜಲು ಜಾಸ್ತಿ
ಪ್ಲಾಸ್ಟಿಕ್ ಬಳೆ ಸುಗಂಧವಿಲ್ಲದ ಪುಷ್ಪದಂತೆ
ಬಳ ಬಳ ಕಣ್ಣೀರು ಸುರಿಸಲು ಹಿಂದಿನ ಸ್ತ್ರೀಯರಿಗಿದ್ದ ಒಂದು ನೆವ
ಬಳಕೆ ಮಾಡಿದಂತೆ ಮಾಸುವ ಆಭರಣ
ವಿಶ್ವನಾಥ ಸುಂಕಸಾಳ
vishwasunkasal@yahoo.com