ವಿವೇಕಕ್ಕೆ ಮಸುಕುವ ಅಲ್ಪವಿರಾಮ
ಇದು ಎಲ್ಲ ಜೀವಿಗಳಲ್ಲೂ ಕಾಮ-ನ್
ಬಯಲು ಮತ್ತು ಬೆಳಕು ಅಪೇಕ್ಷಿಸದ ಬಯಕೆಯಿದು
ಅತಿಯಾದರೆ ಕೋಮಾ
ಯಾರೂ ಅರಿಯರು ಈ 'ಅರಿ'ಯ ಮಹಿಮೆಯನು
ಆಹುತಿ ಕೊಟ್ಟಂತೆ ಜ್ವಲಿಸುವ ಜ್ವಾಲೆ
ಭೋಗಾಸಕ್ತನ ರೋಗ
ತಣಿಸಲಾಗದ ತೃಷೆ
ಯಾವ ಅಗ್ನಿಶಾಮಕ ದಳದಿಂದಲೂ ತಣಿಸಲಾಗದ ಅಗ್ನಿ
ಮೋಹಕ್ಕೊಳಗಾದವನ ದೈಹಿಕ ದಾಹ
ಪ್ರೇಮದ ಉಪ ಉತ್ಪನ್ನ
ಗಂಡು ಹೆಣ್ಣಿನ ನಡುವೆ ಬೆಸೆವ ಬಂಧ, ಬೆಸುಗೆ ಮುರಿದು ಹೋಗಲೂ ಇದೇ ಕಾರಣ
ಸಂತನಲ್ಲಿರಬಾರದ ಸಂತಾನೋತ್ಪತ್ತಿಯ ಮೂಲ ಪ್ರೇರಣೆ
ಹತೋಟಿಯಲ್ಲಿಟ್ಟುಕೊಂಡರೆ ಕೋಟಿ ಕೋಟಿ, ಅನ್ಯಥಾ ಕೈಯ್ಯಲ್ಲಿ ಪಾಟಿ
ಕಾಮಾವಿಷ್ಟ, ಕೋಪಾವಿಷ್ಟ ಮತ್ತು ರಾಗಾವಿಷ್ಟರಿಗೆ ಇಷ್ಟಾನಿಷ್ಟಗಳ ವಿವೇಚನೆ ತಪ್ಪಿಹೋಗುವುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com