ಸಂಪಾದಕೀಯ

ಉದಾರಿ

ಉದಾರಿ  
    ಬಹು ವಿಶಾಲವಾದ ದಾರಿಯಲ್ಲಿ ನಡೆವವ
    ಕೇಳಿದ್ದೆಲ್ಲ ಕೊಟ್ಟು ಆಮೇಲೆ ಉರಿ ಉರಿ ಪಡುವವ
    ಊರದಾರಿಗೆ ಬಂದವರನ್ನೆಲ್ಲ ಮನೆಗೆ ಕರೆದು ಉಪಚರಿಸುವವ
    ಮಾತು ಮಾತಿಗೆ ಉದಾಹರಣೆ ನೀಡುತ್ತ ಅತಿಯಾಗಿ ಮಾತನಾಡುವವ
    ಊರಿಗೇ ಒಂದು ದಾರಿಯಾದರೆ ಉದಾರಿಗೆ ಜಗವೆಲ್ಲ ದಾರಿ
    ದಾರಾ (ಹೆಂಡತಿ) ಹೇಳಿದ್ದನ್ನೆಲ್ಲ ಕೊಡಿಸುವವ
    ಯಾಚಿಸಿದವರಿಗೆಲ್ಲ ಹಣ ಕೊಟ್ಟು ದೋಚಿಸಿಕೊಳ್ಳಲ್ಪಡುವವ
    ದಾರಿ ಕಾಣದವರಿಗೆ ತನ್ನ ಕಣ್ಣನ್ನೇ ಕಿತ್ತು ಕೊಡುವವ
    ಈತನ ಕಿಸೆ ಮತ್ತು ಹೃದಯ ಸಾರ್ವಜನಿಕ ಆಸ್ತಿಯಿದ್ದಂತೆ
    ಕೊಡುಗೆ ನೀಡುವುದರಲ್ಲಿ ಕೊಡುಗೈ ದಾನಿಯೀತ
    ದಾರಿ ಯಾವುದಯ್ಯಾ ಎಂದು ಕೇಳಿದವನಿಗೆ ದಾರಿಯ ಜೊತೆ ದಾರಿ ಖರ್ಚನ್ನೂ ಕೊಟ್ಟು ಕಳಿಸುವವ
    ಕರೆಯದೇ ಬಂದವರಿಗೂ ಪಾಯಸ ಮಾಡಿಸಿ ಬಡಿಸುವವ
    ದೇವಸ್ಥಾನಗಳ ಮೇಲೆ ಕಲ್ಲಿನಲ್ಲಿ ಕೆತ್ತಲ್ಪಟ್ಟ ಹೆಸರಿನ ದಾನಿಗಳು
    ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ದೊಡ್ಡ ಫ್ಲೆಕ್ಸ್ ಹಾಕಿಕೊಳ್ಳುವ ರಾಜಕಾರಣಿ
    ನಾಕಾಣೆ ಕೊಟ್ಟು ಎಂಟಾಣೆ ಕೊಟ್ಟವನಂತೆ ಪೋಸು ಕೊಡುವವ ಬೇಗ ಈ ಉಪಾಧಿ ಗಳಿಸಬಲ್ಲ
    ತಮಗೆ ಬೇಕಾದಾಗ ಸಾಲ ಕೊಡುವನನ್ನು ಜನ ಈ ರೀತಿ ಆಡಿಕೊಳ್ಳುತ್ತಾರೆ
    ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಡುವವನೇ ನಿಜವಾದ ಉದಾರಿ

ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!