ಮೊಣಕಾಲ ಮೇಲಿನ ವಿಷಯ
ಮಾನ ಮರ್ಯಾದೆಯನ್ನೆಲ್ಲ ಕಟ್ಟಿಕೊಂಡವರ ಮಡಿವಂತಿಕೆ
ಆಲಯದೊಳಗಣ ಆಚಾರ ಬಯಲೊಳು ವಿಚಾರಕ್ಕೆ ಬಂದಾಗ
ಎಲ್ಲರೂ ಅಶ್ಲೀಲವನ್ನು ಮೈಗೆ ಅಂಟಿಸಿಕೊಂಡೇ ಬಂದಿರುತ್ತಾರೆ. ಆದರೆ ಬಟ್ಟೆಯಿಂದ ಮುಚ್ಚಿರುತ್ತಾರೆ
ಪಬ್ಬು ಬಾರುಗಳಲ್ಲಿ ಇದಕ್ಕೆ ನಿಯಂತ್ರಣ ರೇಖೆ ಇರುವುದಿಲ್ಲ
ಸಿನಿಮಾದಲ್ಲಿ ಇದು ಶೃಂಗಾರವೆಂಬ ಹೆಸರಿನಲ್ಲಿ ಸಾಧುತ್ವವನ್ನು ಪಡೆಯುತ್ತದೆ
ಇದು ಎಲ್ಲಿರುತ್ತದೆ ಎಂಬುದು ಸಂಶೋಧನಾರ್ಹ ವಿಚಾರ
ಶಿಷ್ಟರು ಮುಖ ಕಿವುಚುವ, ಮುದುಕರು ಮೂಗು ಮುರಿಯುವ ಪಡ್ಡೆ ಹೈಕಳ ಕಣ್ಣರಳಿಸುವ ಸಂಗತಿ
ಕುಟುಂಬ ಸಮೇತ ನೋಡಲಾಗದ, ಮಾತನಾಡಲಾಗದ ವಿಚಾರ
ಹುಡುಗರ ಪಾಳೆಯದಲ್ಲಿ ಹೆಚ್ಚು ಬಿಕರಿಯಾಗುವ ನೀರ್ದೋಸೆ
ಪೋರ ಪೋರಿಯರ ಪೋಕರಿತನಗಳು
ಇಶ್ಶೀ..ಶ್ಶೀ...ಎಂದು ಮುಖಮುಚ್ಚಿಕೊಳ್ಳುವಂಥ ಸಂಗತಿ
ಮುಚ್ಚು ಮರೆ ಎಲ್ಲವನುಬಿಚ್ಚಿ ತೆರೆದಿಟ್ಟಾಗ
ನಾಚಿಕೆ ಬಿಟ್ಟವರ ನಂಗಾನಾಚ್
ದ್ವಂದ್ವಾರ್ಥದ ಮಾತಿಗೆ ಹೀಗೆನ್ನುತಾರೆ. ಅದಕ್ಕಿಂತ ಹೆಚ್ಚಿದ್ದರೆ ಏನೆನ್ನಬೇಕೋ...!
ವಿಶ್ವನಾಥ ಸುಂಕಸಾಳ
vishwasunkasal@yahoo.com