ಬಾಸ್ ಮತ್ತು ಹೆಂಡತಿಗೆ ಇಷ್ಟವಾದದ್ದೆಲ್ಲಾ....
ಎಲ್ಲರಿಗೂ ಇಷ್ಟವಾಗುವ ಶ್ರೀ ಅಥವಾ ಸಂಪತ್ತು
ಶ್ರೇಷ್ಠತ್ವದ ಮಾಪಕ ಅವರವರ ಇಷ್ಟಾನಿಷ್ಠಗಳೇ ಆಗಿರುತ್ತವೆ; ಹೆಚ್ಚಿನ ಸಮಯ
ಒಬ್ಬನಿಗೆ ಶ್ರೇಷ್ಠವಾದದ್ದು ಇನ್ನೊಬ್ಬನಿಗೆ ಕನಿಷ್ಠವಾಗಬಹುದು
ಸಂಸಾರಿಗೆ ಚಿನ್ನ ಶ್ರೇಷ್ಠ, ಸನ್ಯಾಸಿಗೆ ಅದೊಂದು ಅನಿಷ್ಠ
ನಾನೇ ಶ್ರೇಷ್ಠ ಎಂಬ ಭಾವನೆ ತೊಲಗುವವರೆಗೆ ಹೊರಗಿನಶ್ರೇಷ್ಠತೆಗಳು ಕಣ್ಣಿಗೆ ಬೀಳುವುದಿಲ್ಲ
ಕನಿಷ್ಠವಾದದ್ದು ಯಾವುದೂ ಇಲ್ಲ ಎಂಬ ಮನೋಭಾವವೇ ಎಲ್ಲಕ್ಕಿಂತ ಶ್ರೇಷ್ಠ
ಶ್ರೇಷ್ಠತ್ವ ಮತ್ತು ಕನಿಷ್ಠತ್ವಗಳೆಲ್ಲ ಸಾಪೇಕ್ಷ. ಕನಿಷ್ಠವೇ ಇಲ್ಲದಿದ್ದರೆ ಶ್ರೇಷ್ಠತ್ವದ ಅಸ್ತಿತ್ವವೂ ಇಲ್ಲ
ಕೆಲವರಿಗೆ ತಾವು ಹೇಳಿದ್ದು, ತಾವು ಬರೆದಿದ್ದು ಮತ್ತು ತಮ್ಮದು ಮಾತ್ರ ಶ್ರೇಷ್ಠ. ಅವರನ್ನೇ 'ಬುದ್ಧಿಜೀವಿ' ಎನ್ನುತ್ತಾರೆ
ಶಾಸ್ತ್ರಸಮ್ಮತವಾದದ್ದೆಲ್ಲ ಶ್ರೇಷ್ಠವೇ
ಇದೊಂದು ಖಡಿಛಡಿಜ ್ಟಜಿ ಟ್ಝಟಿಜ ...
ನಮ್ಮೊಳಗಿನ ತರತಮಭಾವವೇ ಶ್ರೇಷ್ಠತ್ವವೆಂಬ ಕೂಸಿನ ಜನಕ
ಮೇಲೇರಬೇಕು. ಕಾಲು ಕೆಳಗೇ ಇರಬೇಕು
ಹೆಣ್ಣು ಶ್ರೇಷ್ಠವೋ ಗಂಡು ಶ್ರೇಷ್ಠವೋ ಎಂಬ ಪ್ರಶ್ನೆ ಬಂದಾಗ ಉತ್ತರಿಸುವ ಮೊದಲು ಸದ್ಯಕ್ಕೆ ನಿಮಗ್ಯಾರು ಬೇಕು ಎಂಬುದನ್ನು ನಿರ್ಧರಿಸುವುದು ಒಳಿತು
-ವಿಶ್ವನಾಥ ಸುಂಕಸಾಳ
vishwasunkasal@yahoo.com