ಸಂಪಾದಕೀಯ

ನಿಜಾಮುದ್ದೀನ್ರ ಸರಳತೆ

ಹಜರತ್ ನಿಜಾಮುದ್ದೀನ್ ದೇವರ ಬಗ್ಗೆ ಅಪಾರ ಪ್ರೀತಿಯನ್ನೂ, ಭಕ್ತಿಯನ್ನು ಹೊಂದಿದ್ದ ಒಬ್ಬ ಪ್ರಸಿದ್ಧ ಸೂಫಿ ಸಂತರಾಗಿದ್ದರು. ಹದಿಮೂರನೇ...

ಹಜರತ್ ನಿಜಾಮುದ್ದೀನ್ ದೇವರ ಬಗ್ಗೆ ಅಪಾರ ಪ್ರೀತಿಯನ್ನೂ, ಭಕ್ತಿಯನ್ನು ಹೊಂದಿದ್ದ ಒಬ್ಬ ಪ್ರಸಿದ್ಧ ಸೂಫಿ ಸಂತರಾಗಿದ್ದರು. ಹದಿಮೂರನೇ ಶತಮಾನದ ಈ ದಿವ್ಯಪುರುಷ ಮಾನವೀಯತೆಗೆ ಇನ್ನೊಂದು ಹೆಸರೇ ಎನಿಸಿದ್ದು, ದಯೆ ಮತ್ತು ಕರುಣೆಯ ಪ್ರತೀಕರಾಗಿದ್ದರು. ಹಜಜರತ್ ನಿಜಾಮುದ್ದೀನರು ಕೊನೆಯವರೆಗೂ ಅವಿವಾಹಿತರಾಗಿ ಸದಾ ಸಮಾಜದ ಸುಖ ಶಾಂತಿಯನ್ನು ಬಯಸುತ್ತಿದ್ದರು. ಅವರಿಗೆ ಅಪಾರ ಸಂಖ್ಯೆಯ ಶಿಷ್ಯರಿದ್ದರು. ಅವರ ಕಾಲದ ಎಲ್ಲ ಸುಲ್ತಾನರೂ ನಿಜಾಮುದ್ದೀನರ ಬಗ್ಗೆ ಭಕ್ತಿ ಮತ್ತು ಶ್ರದ್ಧೆಯನ್ನಿಟ್ಟುಕೊಂಡಿದ್ದರು. ಒಮ್ಮೆ  ದೆಹಲಿಯ ಸುಲ್ತಾನನಾಗಿದ್ದ ಖಿಲ್ಜಿ ವಂಶದ ಕೊನೆಯ ದೊರೆ ಕುತುಬುದ್ದೀನ್ ಮುಬಾರಕ್ ಶಾ ವಾರದ ಕೊನೆಯಲ್ಲಿ ತನ್ನ ಅರಮನೆಯಲ್ಲಿ ಒಂದು ವಿಶೇಷ ಸಭೆ ನಡೆಸುತ್ತಿದ್ದ. ಅದರಲ್ಲಿ ದೆಹಲಿಯ ಎಲ್ಲ ಗಣ್ಯರೂ ಭಾಗಹಿಸಲು ನಿರೂಪ ಕಳುಹಿಸಲಾಗುತ್ತಿತ್ತು. ಆ ಸಭೆಗೆ ನಿಜಾಮುದ್ದೀನರು ಎಂದಿಗೂ ಹೋಗುತ್ತಿರಲಿಲ್ಲ. ನಿಜಾಮುದ್ದೀನರನ್ನು ಕಂಡರಾಗದ ಆಸ್ಥಾನಿಕರಲ್ಲಿ ಒಬ್ಬ ಆ ಬಗ್ಗೆ ಸುಲ್ತಾನನ ಗಮನ ಸೆಳೆದು, ನಿಜಾಮುದ್ದೀನ್ ಸುಲ್ತಾನನ ಆದೇಶವನ್ನು ಬೇಕೆಂತಲೇ ಉಲ್ಲಂಘಿಸುತ್ತಿರುವುದಾಗಿ ದೂರು ನೀಡಿದ. ಇದರಿಂದ ಕೆರಳಿದ ಸುಲ್ತಾನ, ಮುಂದೆ ನಡೆಯಲಿರುವ ಸಭೆಗೆ ನಿಜಾಮುದ್ದೀನರು ಬರಲೇಬೇಕೆಂದೂ, ಇಲ್ಲವಾದಲ್ಲಿ ಮರಣದಂಡನೆ ವಿಧಿಸುವುದಾಗಿ ಆಜ್ಞೆ ಮಾಡಿದ. ಅದನ್ನು ನಿಜಾಮುದ್ದೀನರ ಶಿಷ್ಯ ಅಮೀರ್ ಖುಸ್ರು ನಿಜಾಮುದ್ದೀನರಿಗೆ ತಿಳಿಸಿದ. ಆದರೂ ವಿಚಲಿತರಾಗದ ನಿಜಾಮುದ್ದೀನ್ ಸುಲ್ತಾನನ ಆಜ್ಞೆಗೆ ಯಾವ ಉತ್ತರವನ್ನೂ ನೀಡಲಿಲ್ಲ. ಅದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಸಹ ಕಾಣಲಿಲ್ಲ. ಅವರ ಶಿಷ್ಯರಿಗೆಲ್ಲಾ ಯೋಚನೆಗಿಟ್ಟುಕೊಂಡಿತು. ಅರಮನೆಗೆ ತೆರಳುವ ಹಿಂದಿನ ದಿನ ನಿಜಾಮುದ್ದೀನರು ತಮ್ಮ ತಾಯಿಯ ಸಮಾಧಿಯ ಬಳಿ ಬಂದು ಪ್ರಾರ್ಥಿಸಿ ತಮ್ಮ ಬಿಡಾರಕ್ಕೆ ಮರಳಿದಾಗ ಅವರ ಶಿಷ್ಯರು ಅವರಿಗಾಗಿ ಕಾಯುತ್ತಾ ಆತಂಕಭರಿತ ಮುಖವನ್ನು ಹೊತ್ತು ಕುಳಿತಿದ್ದರು. ಅವರೆಲ್ಲರಿಗೂ ಯೋಚಿಸದೆ ಸುಖವಾಗಿ ನಿದ್ರಿಸಲು ಹೇಳಿ ವಿಶ್ರಾಂತಿ ತೆಗೆದುಕೊಳ್ಳಲು ಒಳನಡೆದರು. ಅವರ ಮುಖದ ಮೇಲೆ ಯಾವ ಕ್ಲೇಶವೂ ಇರಲಿಲ್ಲ. ಮರುದಿನ ಬೆಳಿಗ್ಗೆ ಎಲ್ಲರೂ ಉದ್ವೇಗಗೊಂಡಿದ್ದರು. ಮುಂದೇನಾಗುವುದೋ ಎಂಬ ಭಯ ಎಲ್ಲರ ಮನದಲ್ಲೂ ಕಾಡುತ್ತಿತ್ತು. ಅಷ್ಟರಲ್ಲಿ ಬಂದ ಒಂದು ಸುದ್ದಿ ಎಲ್ಲರನ್ನೂ ಅಘಾತಕ್ಕೊಳಗಾಗುವಂತೆ ಮಾಡಿತು...
ಅರಮನೆಯಲ್ಲಿ ದಂಗೆ ಎದ್ದು ದಂಗೆಕೋರರು ಕುತುಬುದ್ದೀನ್ ಮುಬಾರಕ್ನನ್ನು ಕೊಂದು ಹಾಕಿದ್ದರು! ಇಂತಹ ಮಹಿಮಾಪುರುಷ ಹಜರತ್ ನಿಜಾಮುದ್ದೀನ್ರ ಸಮಾಧಿ ಸ್ಥಳ ಮುಸಲ್ಮಾನರಿಗಷ್ಟೇ ಅಲ್ಲ, ಎಲ್ಲವರ್ಗದವರಿಗೂ ಪವಿತ್ರ ಯಾತ್ರಾ ಸ್ಥಳವಾಗಿದೆ. ಪ್ರತಿನಿತ್ಯ ಸಾವಿರಾರು ಜನ ಈಗಲೂ ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್