ಮಧ್ಯಾಹ್ನ ಊಟ ಮಾಡುವ ಸಮಯದಲ್ಲಿ ನಾನು ಒಂದೆರಡು ಧಾರಾವಾಹಿಗಳನ್ನು ನೋಡುತ್ತೇನೆ- ಕನ್ನಡ ಧಾರಾವಾಹಿಗಳಲ್ಲಂತೂ ಯದ್ವಾತದ್ವಾ ಕಥೆ ಬೆಳೆಸುತ್ತ, ವೀಕ್ಷಕರನ್ನು ಬೆಪ್ಪುತಕ್ಕಡಿಯನ್ನಾಗಿಸಿದ್ದಾರೆ. ವಂಚನೆ, ಮೋಸ, ದಗಾ, ಹತ್ಯೆ, ಕ್ರೌರ್ಯ, ಅತ್ಯಾಚಾರ- ಇವುಗಳೇ ಪ್ರಧಾನವಾಗಿ ಚಿತ್ರಿಸುತ್ತ, ಸುರುಳಿ ಸುತ್ತುತ್ತಿದ್ದಾರೆ. ಪೊಲೀಸರನ್ನಂತೂ ಅವಿವೇಕಿಗಳು, ದಡ್ಡರು, ಮೂರ್ಖರು, ಅಯೋಗ್ಯರು, ಭ್ರಷ್ಟರು ಎಂಬಂತೆ ಚಿತ್ರಿಸಲಾಗುತ್ತದೆ. ಇಲ್ಲವಾದರೆ ತೋರಿಸುವುದೇ ನಿಜವೆಂದು ಜನ ಭಾವಿಸುವ ಅಪಾಯಕ್ಕೆ ಅಂತ್ಯವಿಲ್ಲವೆ?
-ಸೋಮಶೇಖರ ರಾಣೆಬೆನ್ನೂರ್, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com