ರಮೇಶ್ ಭಟ್, ಆವರ್ಸೆ, ಮೈಸೂರು, 9164276058
ಮಳೆ ಹುಡುಗಿ ಜೆಡಿಎಸ್ ಬಿಟ್ಟು ಕೆಜೆಪಿ ಯಾಕೆ ಸೇರಿದ್ದು?
ಓಟಿನ ಮಳೆ ನಿರೀಕ್ಷೆಯಲ್ಲಿ!
ಲಕ್ಕೂರು ಎಂ. ನಾಗರಾಜ, ಮಾಲೂರು, 900538954
ಕನ್ನಡ ನಾಡಿನಲ್ಲಿ ಶಾಂತಿ ಮಂತ್ರವನ್ನು ಜಪಿಸುವುದು ಯಾವಾಗ ಭಟ್ರೇ?
ಶಾಂತಿ ಸಿಟ್ಟಾದಾಗ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹುಡುಗಿಯರ ನಡಿಗೆಯನ್ನು ನೋಡಿ ಅವರ ವಯಸ್ಸನ್ನು ಹೇಳಬಹುದಾ?
ಕೇವಲ ಜಾತಕ ನೋಡಿ ಅಂದ ಹೇಳಬಹುದಾ ಅಂತ ಕೇಳ್ದಂಗಾಯ್ತು!
ಆರ್. ತಿಪ್ಪೆರುದ್ರೇಶ್, ಬೆಳಗೆರೆ, 9964686970
ಒಂದು ರೂಪಾಯಿ ದುಡ್ಡು ಖರ್ಚು ಮಾಡದೇ ಗೆಲ್ಲುವ ಸಜ್ಜನ ರಾಜಕಾರಣಿ ಯಾವ ಪಕ್ಷದಲ್ಲಿದ್ದಾರೆ?
ಕ್ಷಮಿಸಿ. ಅಂತಹ ಪಕ್ಷ ಇನ್ನೂ ಸ್ಥಾಪನೆಯಾಗಿಲ್ಲ.
ಖುಷಿ, ಕಲ್ಲಹಳ್ಳಿ, ಹಾಸನ, 8277441189
ಫ್ಯಾಷನ್ ಡಿಸೈನರ್ ಮಧು ಬರೆಯುವ ತರಲೆ ಪ್ರಶ್ನೆಗಳಿಗೆ ನೀವೇ ಸ್ಪೂರ್ತಿಯಂತೆ?
ತರಲೆ ಕೆಲಸಕ್ಕೆ ಜನ ಯಾವತ್ತೂ ಬೇರೆಯವರತ್ತಲೇ ಕೈ ತೋರಿಸೋದು.
-ಬಾಣಭಟ್ಟ