ಕೋಲ್ಯ ಟ್ರೇನ್ನ ಒಂದು ಸೀಟಿನ ಮೇಲೆ ಒಬ್ಬನೇ ಮಲಗಿದ್ದ.
ಮುದುಕ: ಏನಪ್ಪಾ ಸ್ವಲ್ಪ ಸೈಡಿಗೆ ಸರಿದು ಕೂತುಕೋ. ನಾನೂ ಕೂಡ್ತೀನಿ...
ಕೋಲ್ಯ: ಓಯ್! ನಾನು ಯಾರು ಅಂತ ಗೊತ್ತಾ?
(ಮುದುಕ ಹೆದರಿ ಬೇರೆಡೆ ಹೋಗಿ ಕುಳಿತುಕೊಂಡ. ಹೀಗೆಯೇ ನಾಲ್ಕೈದು ಜನರಿಗೆ ಕೋಲ್ಯ ಹೆದರಿಸಿ ಕಳುಹಿಸಿದ. ಕೊನೆಗೆ ಪೆಹಲ್ವಾನನೊಬ್ಬ ಕೋಲ್ಯ ಇದ್ದಲ್ಲಿಗೆ ಬಂದ)
ಪೆಹಲ್ವಾನ: ಸ್ವಲ್ಪ ಸೈಡಿಗೆ ಸರಿ ಮರಿ. ನಾನೂ ಕೂತ್ಕೊಳ್ತೀನಿ..
ಕೋಲ್ಯ: ಓಯ್! ನಾನು ಯಾರೂ ಅಂತ ಗೊತ್ತೇನೋ?
ಪೆಹಲ್ವಾನ(ಕೋಲ್ಯನ ಕುತ್ತಿಗೆಗೆ ಕೈ ಹಾಕಿ): ಯಾವನಲೇ ನೀನು?
ಕೋಲ್ಯ: ಸರ್ ನಾನು... 'ರೋಗಿ' ಸರ್! ಎರಡು ದಿನದಿಂದ ಹುಷಾರಿಲ್ಲ!