ಸಂಪಾದಕೀಯ

ಕೈ ಇಲ್ಲದಿದ್ದರೇನಂತೆ, ಕನಸಿರಬೇಕು!

ಅಂಗವೈಕಲ್ಯವನ್ನು ಒಂದು ಶಾಪ ಎಂದು ತಿಳಿದಿರುವವರ ಸಂಖ್ಯೆ ಜಾಸ್ತಿಯಿದೆ. ಆದರೆ ತಮಗಿರುವ ಅಂಗವೈಕಲ್ಯವನ್ನೇ ವರವಾಗಿ ಪರಿವರ್ತಿಸಿ ಅದ್ಭುತ ಪ್ರಗತಿ ಸಾಧಿಸಿದವರೂ ಇದ್ದಾರೆ. ಅವರಲ್ಲಿ ಒಬ್ಬ ಹೆರಾಲ್ಡ್ ರಸೆಲ್. ಹೆರಾಲ್ಡ್ ಕೆನಡಾ ದೇಶದವನು. ಎರಡನೇ ಮಹಾಯುದ್ಧದಲ್ಲಿ ಹೋರಾಡಿ ಹೆಸರುಗಳಿಸಿದವನು. ಅವನ ದುರಾದೃಷ್ಟ, ಆ ಯುದ್ಧದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡು ಅಂಗವಿಹೀನನಾದನು. ಇನ್ನು ತನ್ನ ಜೀವನ ಮುಗಿಯಿತು, ಕೈಕಳೆದುಕೊಂಡು ಸಾಧಿಸುವುದೇನು ಎಂದು ಅವನಿಗೆ ತುಂಬಾ ದುಃಖವಾಯಿತು. ಒಂದು ದಿನ ಇದೇರೀತಿ ಯುದ್ಧದಲ್ಲಿ ಕೈಗಳನ್ನು ಕಳೆದುಕೊಂಡಿದ್ದ ಚಾರ್ಲ್ ಮಾಕ್ ಗೊನೆಗೆಲ್ ಎಂಬಾತ ರಸೆಲ್‌ನನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದ. ಆಗಿದ್ದಕ್ಕೆ ಯೋಚಿಸದೆ ಮುಂದೆ ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕೆಂದು ಸಾಂತ್ವನ ನೀಡಿದ. ಎಲ್ಲವನ್ನು ಕಳೆದುಕೊಂಡರೂ, ಇನ್ನೂ ಸ್ವಲ್ಪ ಪಡೆಯುವುದಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಸಲಹೆ ನೀಡಿದ. ಅಲ್ಲದೆ 'ನೀನೊಬ್ಬ ಅಂಗವಿಕಲನೇ ಹೊರತು ಅಸಹಾಯಕನಲ್ಲ' ಎಂದು ಹೇಳಿದ. ಅವನ ಮಾತುಗಳು ಅವನಿಗೆ ಅಮೃತ ಸಿಂಚನದಂತಿದ್ದವು. ತನ್ನ ಮುರಿದ ಕೈಕೊನೆಗೆ ಎರಡುಕೊಂಡಿಗಳನ್ನು ತಗಲಿಸಿಕೊಂಡು ತನ್ನ ದಿನ ನಿತ್ಯದ ಕೆಲಸವನ್ನು ಅದರ ಸಹಾಯದಿಂದ ಮಾಡುವುದನ್ನು ಕಲಿತ. ಅಷ್ಟರಲ್ಲಿ ಅವನಿಗೆ 'ದಿ ಬೆಸ್ಟ್ ಇಯರ್ ಆಫ್ ಅವರ್ ಲೈವ್ಸ್‌'  ಎಂಬ ಚಿತ್ರದಲ್ಲಿ ನಟಿಸಲು ಕರೆಬಂತು. ಅದರಲ್ಲಿಯೂ ಅವನು ಎರಡು ಕೈಗಳನ್ನು ಕಳೆದುಕೊಂಡವನ ಕಥೆಯೇ. ಅದರಲ್ಲಿ ತನ್ಮಯತೆಯಿಂದ ನಟಿಸಿದ. ಅದು ಬಿಡುಗಡೆಯಾದಾಗ ಅವನ ನಟನೆಯನ್ನು ನೋಡಿದ ಜನ ಹೊಗಳಿಕೆಯ ಮಹಾಪೂರವನ್ನೇ ಹರಿಸಿದರು. ಅಲ್ಲದೆ ಆ ವರ್ಷ ಅವನಿಗೆ ಆ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಕ್ಕಾಗಿ ಅಕಾಡೆಮಿ ಪ್ರಶಸ್ತಿ ದೊರೆಯಿತು. ನಂತರ ಅವನು ಕೆಲವು ಚಿತ್ರಗಳಲ್ಲಿ ಮತ್ತು ದೂರದರ್ಶನದಲ್ಲಿ ನಟಿಸಿ, ಆಸ್ಕರ್ ಪ್ರಶಸ್ತಿ ಸಹ ಗಳಿಸಿದ. ಅಲ್ಲದೆ ಅವನ ಅದ್ಭುತ ನಟನೆ ಅವನಿಗೆ ಅಪಾರ ಹೆಸರನ್ನೂ ತಂದಿತು. ಆಗ ಅವನಿಗನ್ನಿಸಿತು, 'ತನಗೆ ಕೊರತೆಯಿದೆ ಎಂದು ಸುಮ್ಮನೆ ಕುಳಿತರೆ ಅದರಿಂದ ಸಾಧಿಸುವ ದಾರಿಯನ್ನು ನಮ್ಮ ಕೈಯಾರೆ ಮುಚ್ಚಿಕೊಂಡಂತೆ' ಎಂದು. ತನ್ನ ಪತ್ನಿಯ ವೈದ್ಯಕೀಯ ವೆಚ್ಚಕ್ಕಾಗಿ ಪರದಾಡುವ ಸ್ಥಿತಿ ಬಂದಾಗ ಅವನು ತನಗೆ ನೀಡಿದ್ದ ಆಸ್ಕರ್ ಪ್ರಶಸ್ತಿಯನ್ನು 60,500 ಡಾಲರ್‌ಗಳಿಗೆ ಮಾರಿ ತನಗೆ ಅಗತ್ಯವಾದ ಹಣವನ್ನು ಹೊಂದಿಸಿಕೊಂಡ. ಹೀಗೆ ಅಂಗವೈಕಲ್ಯವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಜೀವನದಲ್ಲಿ ಮಹತ್ಸಾಧನೆ ಮಾಡಿದ ರಸೆಲ್ ನಮಗೆಲ್ಲಾ ಆದರ್ಶವಾಗಲಿ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!