ಸಂಪಾದಕೀಯ

ಶ್ರೀ ಕೃಷ್ಣನ ಆರಾಧಕಿಯಾಗಿದ್ದ ಬೇಗಂ ಅಖ್ತರ್

ಬೇಗಂ ಅಖ್ತರ್ ಅವರ ಹೆಸರು ಭಾರತೀಯ ಸಂಗೀತ ಜಗತ್ತಿನಲ್ಲಿ ಅವಿಸ್ಮರಣೀಯವಾದದ್ದು. ಘಜಲ್, ದಾದ್ರಾ ಮತ್ತು ಠುಮರಿ ಗಾಯನಕ್ಕೆ ಹೆಸರುವಾಸಿಯಾಗಿದ್ದ ಈಕೆ ಪಾಟಿಯಾಲಾದ ಉಸ್ತಾದ್ ಅಟಾ ಮಹಮ್ಮದ್ ಅವರಿಂದ ಸಂಗೀತ ಕಲಿತು ತನ್ನ ಹದಿನೈದನೇ ವಯಸ್ಸಿಗೇ ಸಂಗೀತ ಪ್ರಿಯರ ಮನ ಗೆದ್ದ ಅಪ್ರತಿಮ ಹಾಡುಗಾರ್ತಿ. 1930ರಲ್ಲಿ ಬಿಹಾರ ಭೂಕಂಪ ಸಂತ್ರಸ್ಥರ ನಿಧಿಗಾಗಿ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದ ಮೂಲಕ ಪರಿಚಯವಾದ ಅಖ್ತರ್ ನಂತರದ ದಿನಗಳಲ್ಲಿ ಜನಪ್ರಿಯ ಗಾಯಕಿಯಾಗಿ ಹೊರಹೊಮ್ಮಿದಳು. ಆಕೆಯ ಗಾಯನಕ್ಕೆ ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರೂರಂಥವರೇ ಮನಸೋತಿದ್ದರು. ಗ್ರಾಮಾಫೋನ್ ಕಂಪನಿ ಆಕೆಯ ಹಾಡುಗಳ ಧ್ವನಿಮುದ್ರಿಸಿದ ಮೇಲಂತೂ ಅಕೆ ಸುಪ್ರಸಿದ್ಧ ಗಾಯಕಿಯಾಗಿ ಹೊರಹೊಮ್ಮಿದಳು. ಅದ್ಧೂರಿಯ ಜೀವನ ಮಾಡುತ್ತಿದ್ದ ಆಕೆ 1950 ರ ಸುಮಾರಿಗೆ ಲಕ್ನೋದಲ್ಲಿ ಕಾರು ಇಟ್ಟಿದ್ದ ಕೆಲವೇ ಜನರಲ್ಲಿ ಒಬ್ಬಳಾಗಿದ್ದಳು. ಮೊದಮೊದಲು ಚಲನಚಿತ್ರಗಳಲ್ಲಿ ನಟಿಸುತ್ತಿದ್ದರೂ ನಂತರದ ದಿನಗಳಲ್ಲಿ ಅದನ್ನು ಬಿಟ್ಟು ಹಾಡಿಗೆ ಮಾತ್ರ ತನ್ನ ಬದುಕನ್ನು ಸೀಮಿತಗೊಳಿಸಿದಳು ಅಖ್ತರ್. ಆಕೆ ನಟಿಸಿದ 'ಏಕ್ ದಿನ್ ಕಾ ಸುಲ್ತಾನ್' ಮತ್ತು 'ನಳ-ದಮಯಂತಿ' ಪಸಿದ್ಧಿ ಪಡೆದವು. ಅದ್ಧೂರಿ ಬದುಕನ್ನು ಇಷ್ಟಪಡುತ್ತಿದ್ದ ಅಖ್ತರ್ ಬೆಲೆಬಾಳುವ ಒಡವೆಗಳನ್ನು ಧರಿಸಲು ಇಷ್ಟಪಡುತ್ತಿದ್ದಳು. ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಬೇಗಂ ಅಖ್ತರ್ಳನ್ನು ಅರಸುತ್ತಾ ಬಂದವು. ಎರಡು ಬಾರಿ ಮೆಕ್ಕಾ ಯಾತ್ರೆಯನ್ನೂ ಆಕೆ ಕೈಗೊಂಡಿದ್ದಳು. ಆದರೆ ಆಕೆ ಕೆಲವು ದೌರ್ಬಲ್ಯಗಳ ದಾಸಿಯಾಗಿದ್ದಳು. ಸಿಗರೇಟು ಪ್ರಿಯಳಾಗಿದ್ದ ಅಖ್ತರ್ ನಂತರದ ದಿನಗಳಲ್ಲಿ ಕುಡಿತದ ದಾಸಿಯಾದಳು. ಒಮ್ಮೆಯಂತೂ ರೈಲ್ವೆ ಗಾರ್ಡಿನ ಹಸಿರು ನಿಶಾನೆಯನ್ನೇ ಕಿತ್ತುಕೊಂಡು ಗಾರ್ಡ್ನನ್ನು ಸಿಗರೇಟು ತರಲು ಓಡಿಸಿದ್ದಳು. ಆದರೂ ಜೀವನದ ಕಟ್ಟಕಡೆಯವರೆಗೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಸಂಗೀತ ಪ್ರಿಯರ ಮನ ತಣಿಸಿದ್ದಂತೂ ಸುಳ್ಳಲ್ಲ. ಮುಸ್ಲಿಂ ಸಂಪ್ರದಾಯದಲ್ಲಿ ಹುಟ್ಟಿ ಬೆಳೆದು ಹೆಸರು ಮಾಡಿದ್ದರೂ ಆಕೆ ಶ್ರೀಕೃಷ್ಣನನ್ನು ಮನಸಾರೆ ಆರಾಧಿಸುತ್ತಿದ್ದಳು. ತನ್ನಲ್ಲಿ ಹಾಡು ಕಲಿಯಲು ಬರುತ್ತಿದ್ದ ಶಿಷ್ಯರಿಗೆ 'ಶ್ರೀಕೃಷ್ಣನನ್ನು ಆರಾಧಿಸದ ಹೊರತು ಹಾಡಲು ಸಾಧ್ಯವಿಲ್ಲ' ಎಂದು ಹೇಳುತ್ತಿದ್ದಳು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!