ತಿಮ್ಮ: ಯಾಕೋ ಕೋಲ್ಯ ಇಷ್ಟು ಸಪ್ಪಗಿದೀಯಾ?
ಕೋಲ್ಯ: ಗರ್ಲ್ಫ್ರೆಂಡ್ ಜೊತೆ ಜಗಳ ಆಯ್ತು ಮಚ್ಚಾ...ನಾನು ಚಿಕ್ಕ ಹುಡುಗರ ಥರ ವರ್ತನೆ ಮಾಡ್ತೀನಿ ಅಂತ ಬೈಯ್ದು ಹೊರಟು ಹೋದ್ಲು. ನಾನು ಯಾವತ್ತಾದ್ರೂ ಹಾಗೆ ಮಾಡಿದಿನೇನೋ?
ತಿಮ್ಮ: ಮತ್ತೆ ನೀನು ಸುಮ್ನೆ ಬೈಸ್ಕೊಂಡು ಬಂದ್ಯಾ?
ಕೋಲ್ಯ: ನಾನು ಸುಮ್ನೆ ಇರ್ತೀನಾ? ರಾತ್ರಿ ಅವಳ ಮನೆಗೆ ಹೋದೆ...
ತಿಮ್ಮ: ಹೂಂ ಆಮೇಲೆ?
ಕೋಲ್ಯ: ಡೋರ್ಬೆಲ್ ಬಾರಿಸಿ ಓಡಿ ಬಂದ್ಬಿಟ್ಟೆ!