(ಊರಿನ ಅತ್ಯಂತ ಸುಂದರ ಕೋಳಿಯ ಮದುವೆ ಕಾಗೆಯೊಂದಿಗೆ ಆಯಿತು.)
ಹುಂಜ(ನೆಲ ಕೆರೆಯುತ್ತಾ): ಅಲ್ಲಾ ಸ್ವೀಟಿ...ನಾವೇನು ಸತ್ತು ಹೋಗಿದ್ವಾ? ಹೋಗಿ ಹೋಗಿ ಆ ಕಾವ್ ಕಾವ್ ಕರಿ ಕಾಗೆ ಜೊತೆ ಮದುವೆ ಆದ್ಯಲ್ಲ?
ಕೋಳಿ(ನಿಟ್ಟುಸಿರಿಟ್ಟು): ನಾನೇನು ಮಾಡ್ಲಿ ಹೇಳು ಹುಂಜು!? ನಿನ್ಜೊತೇನೇ ಮದುವೆ ಆಗ್ಬೇಕು ಅಂತ ಡಿಸೈಡ್ ಮಾಡಿದ್ದೆ. ಆದ್ರೆ ಹುಡುಗ ಏರ್ಫೋರ್ಸ್ನಲ್ಲಿದಾನೆ ಅಂತ ಅಪ್ಪ ಒತ್ತಾಯ ಮಾಡಿ ಮದುವೆ ಮಾಡಿದ್ರು!
---
ಶ್ರೀ ಶ್ರೀ ಕೋಲ್ಯಾನಂದ ಶ್ರೀಗಳ ಉಪದೇಶ : ಡಾಕ್ಟರ್ ಮತ್ತು ದೇವರಿಗೆ ಎಂದಿಗೂ ಬೇಜಾರು ಮಾಡಬೇಡಿ. ದೇವರಿಗೆ ಸಿಟ್ಟು ಬಂದ್ರೆ ಡಾಕ್ಟರ್ ಹತ್ರ ಕಳುಹಿಸುತ್ತಾನೆ, ಇನ್ನು ಡಾಕ್ಟರ್ಗೆ ಸಿಟ್ಟು ಬಂದ್ರೆ ದೇವರ ಹತ್ತಿರ!