ಪತ್ನಿ: ನಿಮ್ಮ ಹುಟ್ಟುಹಬ್ಬಕ್ಕೆ ಏನು ಗಿಫ್ಟ್ ಕೊಡ್ಲಿ?
ಪತಿ: ಪ್ರೀತಿ ಕೊಡು, ಗೌರವ ಕೊಡು, ನಾನು ಹೇಳಿದ್ದು ಕೇಳು... ಅಷ್ಟೇ ಸಾಕು. ಗಿಫ್ಟ್ ಏನೂ ಬೇಡ
ಪತ್ನಿ(ತುಸು ಹೊತ್ತು ಯೋಚಿಸಿ): ಬೇಡ ಬೇಡ, ನಾನು ಗಿಫ್ಟೇ ಕೊಡ್ತೀನಿ!
---
ಬಾಸ್ ಕೋಲ್ಯನಿಗೆ ಮೆಸೇಜ್ ಮಾಡಿದ: 'ಓಯ್, ಬೇಜಾರಾಗ್ತಿದೆ. ಒಂದೊಳ್ಳೆ ಮೆಸೇಜು ಕಳುಹಿಸು..'
'ಸರ್ ನಾನು ತುಂಬಾ ಬ್ಯುಸಿ ಇದೀನಿ' ಎಂದು ಕೋಲ್ಯ ಸಂದೇಶ ಕಳುಹಿಸಿದ.
ಬಾಸ್: ತುಂಬಾ ಚೆನ್ನಾಗಿದೆ. ಇನ್ನೊಂದು ಜೋಕ್ ಕಳಿಸು!