ಅಪ್ಪ: ಒಂದು ಗ್ಲಾಸ್ ನೀರು ತಂದು ಕೊಡು.
ಕಿರಿಮಗ: ತರೋದಿಲ್ಲ...ನಾನು ಟಿ.ವಿ. ನೋಡ್ತಾ ಇದೀನಿ.
ಹಿರಿಮಗ: ಹೋಗ್ಲಿ ಬಿಡು ಅಪ್ಪ, ಅವನು ಬಹಳ ಸೋಮಾರಿ. ನೀನೇ ಹೋಗಿ ನೀರು ಕುಡಿ. ಹಾಗೇ ಬರ್ತಾ ನನಗೂ ಒಂದು ಗ್ಲಾಸ್ ನೀರು ತಂದು ಕೊಡು...!!
---
ತಿಮ್ಮ: ಯಾಕೋ ಕೋಲ್ಯ ಸಪ್ಪಗಿದೀಯಾ?
ಕೋಲ್ಯ: ನೋವು ಮಚ್ಚಾ ನೋವು....
ತಿಮ್ಮ: ಅದೇನು ಕಥೆ ಅಂತ ನನ್ನ ಮುಂದೆ ಹೇಳ್ಬಾರ್ದಾ?
ಕೋಲ್ಯ: ಹೇಳೇ ಬಿಡ್ಲಾ?
ತಿಮ್ಮ: ಹೇಳು.
ಕೋಲ್ಯ: ಎಖರಪೇದಾಪವುರ್ಪನೂ ದಜಪಸ ವಲಪಸನೇ....ಒ
ತಿಮ್ಮ: ಅರ್ಥ ಆಗ್ಲಿಲ್ಲ...
ಕೋಲ್ಯ: ನನ್ನ ನೋವು ಯಾರಿಗೂ ಅರ್ಥ ಆಗೋಲ್ಲ!