ಒಮ್ಮೆ ದೇಶದ ಎಲ್ಲಾ ಕಾಲೇಜಿನ ಪ್ರೊಫೆಸರ್‌ಗಳನ್ನು ಕರೆದು ಹೊಸ ವಿಮಾನವೊಂದರಲ್ಲಿ ಕೂರಿಸಲಾಯಿತು. ಅವರೆಲ್ಲ ಅದರಲ್ಲಿ ಕುಳಿತ ಮೇಲೆ, ಆ ವಿಮಾನವನ್ನು ಕಾಲೇಜು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆಂದು ತಿಳಿಸಲಾಯಿತು. ಆಗ ಥರಗುಟ್ಟಿದ ಪ್ರೊಫೆಸರ್‌ಗಳು ಎದ್ದು ಓಡತೊಡಗಿದರು. ಆದರೆ ಒಬ್ಬ ಪ್ರೊಫೆಸರ್ ಮಾತ್ರ ನಿಶ್ಚಿಂತನಾಗಿ ಕುಳಿತಿದ್ದ. 'ನಿನಗೆ ಭಯವಿಲ್ಲವೇ?' ಎಂದು ಯಾರೋ ಆತನನ್ನು ಕೇಳಿದರು. ಆಗ ಆತ ಹೇಳಿದ: 'ಈ ವಿಮಾನದ ನಿರ್ಮಾಣ ಮಾಡಿದ್ದು ನನ್ನ ವಿದ್ಯಾರ್ಥಿಗಳು....ಅದು ಸ್ಟಾರ್ಟ್ ಕೂಡ ಆಗುವುದಿಲ್ಲ ಎನ್ನುವ ನಂಬಿಕೆ ನನಗಿದೆ!'