ಸಂಪಾದಕೀಯ

ಭಟ್ರೆ ಮಳೆ ಬರೀ ಬೆಂಗಳೂರಲ್ಲಷ್ಟೇ ಬರ್ತಾ...

ಭಟ್ರೆ ಮಳೆ ಬರೀ ಬೆಂಗಳೂರಲ್ಲಷ್ಟೇ ಬರ್ತಾ ಇದೆಯಲ್ಲ, ಇಲ್ಲಿಗೂ ಸ್ವಲ್ಪ ಕಳಿಸಿಕೊಡ್ತೀರಾ?
ಮಳೆ ಹುಡುಗಿನ್ನೇ ನಿಮ್ಮೂರಿಗೆ ಕಳಿಸಿದ್ವಲ್ಲ ಮಾರಾಯ, ವಾಪಸ್ ಕಳುಹಿಸಿಬಿಟ್ರಿ!
ಪ್ರಮೋದ್ ಕುಮಾರ್, ಎಚ್‌ಆರ್‌ಬಿ ಲೇಔಟ್, ರಾಯಚೂರು

ಸ್ನೇಹದಿಂದ ಜಗತ್ತಾ? ಪ್ರೀತಿಯಿಂದ ಜಗತ್ತಾ?
ಜಗತ್ತು ಇರುವುದರಿಂದ ಪ್ರೀತಿ, ಸ್ನೇಹ ಎಲ್ಲಾ.
ವಿ. ಹೇಮಂತಕುಮಾರ, ಬೆಂಗಳೂರು, 9035992900

ಪತ್ನಿಯನ್ನು ಪ್ರೀತಿಯಿಂದ 'ಕಿಚನ್ ಕ್ವೀನ್‌' ಅಂತಾನೂ ಕರೆಯಬಹುದಲ್ವೇ?
ಹಾಗಂದ ತಕ್ಷಣ ಅವಳು ಬೇಗ ಮಾಡು 'ಕಿಚನ್ ಕ್ಲೀನ್‌' ಅಂದಾಳು ಹುಶಾರ್.


ಮದುವೆ ಆದವನಿಗೆ ಹೆಂಡ್ತಿ- ಮಕ್ಕಳ ಚಿಂತೆ. ಮದುವೆ ಆಗದವನಿಗೆ?
ಹೆಂಡತಿ ಆಗುವವಳ ಚಿಂತೆ!
ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು

ಕೆಲವು ಮನೆಗಳಲ್ಲಿ ಮಡದಿಯರು ಸರ್ವಾಧಿಕಾರಿಯಂತೆ ವರ್ತಿಸುತ್ತಾರಲ್ಲಾ?
ಉಳಿದ ಮನೆಗಳಲ್ಲಿ ಗಂಡಸರು ಸುಮ್ಮನೆ ಹೊಂದಿಕೊಂಡಿರುತ್ತಾರೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ

 -ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!