ಸಂಪಾದಕೀಯ

ಶಿವಲಿಂಗವನ್ನು ಭಾರತಕ್ಕೆ ತಲುಪಿಸಿದ ಆಂಗ್ಲ

1896ರ ಸಮಯ. ಜಾರ್ಜ್ ಬರ್ಡ್‌ವುಡ್ ಎಂಬ ಆಂಗ್ಲ ಅಧಿಕಾರಿಯ ಕಚೇರಿಯಲ್ಲಿ ಒಂದು ರುದ್ರಾಕ್ಷಿ ಮಾಲೆ ಹಾಕಿದ ಶಿವಲಿಂಗವಿತ್ತು. ಜಿ.ಎನ್.ನಾಡಕರ್ಣಿ ಎಂಬ ವಕೀಲರು ಒಮ್ಮೆ ಲಂಡನ್ನಿನ ತಮ್ಮ ಮಿತ್ರರಾದ ಬರ್ಡ್‌ವುಡ್‌ರ ಕಚೇರಿಗೆ ಹೋದಾಗ ಅವರಿಗಾದ ಆಶ್ಚರ್ಯ ಅಷಿಷ್ಟಲ್ಲ. ವಿದೇಶೀಯನ ಕಚೇರಿಯಲ್ಲಿ ಹಿಂದು ದೇವತೆಯನ್ನು ಕಂಡು ಅವಕ್ಕಾದರು. ನಾಡಕರ್ಣಿಯವರ ಮನವರಿತ ಜಾರ್ಜ್ ಆ ಶಿವಲಿಂಗದ ವಿಚಾರ ತಿಳಿಸಿದರು. ಕೋಲ್ಕತದ ಶಿಲ್ಪಿಯೊಬ್ಬ ಸುಂದರವಾಗಿ ಕೆತ್ತಿ ಅದನ್ನು 1885ರಲ್ಲಿ ಅಮೆರಿಕದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಪ್ರದರ್ಶಿಸಲು ಕಳುಹಿಸಿದ್ದ. ಆದರೆ ಅಶ್ಲೀಲತೆಯ ಪ್ರಶ್ನೆ ಎತ್ತಿ ಅದರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮರುವರ್ಷ ಲಂಡನ್ನಿನಲ್ಲಿ ನಡೆದ ಸಮ್ಮೇಳನಕ್ಕೆ ಅದನ್ನು ಕಳುಹಿಸಲಾಯಿತು. ಅಲ್ಲಿಯೂ ಸಹ ಅದು ಪ್ರದರ್ಶಿತವಾಗದೆ ಕೊನೆಗೆ ಅದನ್ನು ಬೀದಿಗೆ ಎಸೆಯಲಾಯಿತು. ಹೀಗೆ ಬೀದಿಪಾಲಾದ ಲಿಂಗವನ್ನು ಭಾರತೀಯ ದೇವರುಗಳ ಬಗ್ಗೆ ಸಾಕಷ್ಟು ತಿಳಿದಿದ್ದ ಬರ್ಡ್‌ವುಡ್ ಅದನ್ನು ತಮ್ಮ ಕಚೇರಿಗೆ ತಂದು ಪ್ರಮುಖ ಜಾಗದಲ್ಲಿ ಪ್ರತಿಷ್ಠಾಪಿಸಿದ್ದರು. ಆಕ್ಸಫರ್ಡ್‌ನ ವಸ್ತು ಸಂಗ್ರಹಾಲಯಕ್ಕೆ ಅದನ್ನು ತಲುಪಿಸಿ ಅಲ್ಲಿಡಲು ನಡೆಸಿದ ಪ್ರಯತ್ನವೂ ಕೈಗೂಡಲಿಲ್ಲ. ಆಗ ಜಾರ್ಜ್, ತಾವು ಹಿಂದುವಾಗಿಲ್ಲದಿದ್ದರೂ ಒಂದು ಧರ್ಮದವರಿಗೆ ಪವಿತ್ರವಾದದ್ದು ಬೇರೆ ಧರ್ಮದವರಿಗೂ ಪವಿತ್ರವೇ ಆಗಿರುವುದರಿಂದ ಅದನ್ನು ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವುದಾಗಿಯೂ ಅದನ್ನು ಎಲ್ಲಿಯಾದರೂ ಪ್ರತಿಷ್ಠಾಪಿಸಿ ಪೂಜಿಸುವ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಂಡರು.
 ನಾಡಕರ್ಣಿಯವರು ಭಾರತಕ್ಕೆ ಹಿಂದಿರುಗಿದ ಸ್ವಲ್ಪ ಸಮಯದ ನಂತರ ಬರ್ಡ್‌ವುಡ್ ತಾವು ಹೇಳಿದಂತೆ ಶಿವಲಿಂಗವನ್ನು ಜೋಪಾನವಾಗಿ ಕಳುಹಿಸಿಕೊಟ್ಟರು. ಹೀಗೆ ಸಪ್ತಸಾಗರವನ್ನು ದಾಟಿ ಬಂದ ಆ ಶಿವಲಿಂಗವನ್ನು 'ಚಕ್ರವರ್ತಿ ಶಿವಲಿಂಗ' ಎಂದು ಕರೆಯಲಾಯಿತು. ನಾಡಕರ್ಣಿಯವರು ತಮ್ಮ ಗುರುಗಳಾದ ಆತ್ಮಾನಂದ ಸರಸ್ವತಿಯವರಿಗೆ ಅದನ್ನು ಅರ್ಪಿಸಿದರು. ಅದನ್ನು ಸ್ವತಃ ಗೋಕರ್ಣದ ಆತ್ಮಾನಂದ ಸರಸ್ವತಿಯವರು ವಿಧಿವತ್ತಾಗಿ ತಮ್ಮ ಆಶ್ರಮದಲ್ಲಿ ಸ್ಥಾಪಿಸಿದರು. ಅಂದಿನಿಂದ ಇಲ್ಲಿಯವರೆಗೂ ಆ ಶಿವಲಿಂಗ ಪೂಜೆಗೊಳ್ಳುತ್ತಿದ್ದು ಪ್ರತಿನಿತ್ಯ ಅಸಂಖ್ಯಾತ ಜನ ಅದರ ದರ್ಶನ ಭಾಗ್ಯ ಪಡೆಯಲೆಂದೇ ಅಲ್ಲಿಗೆ ಭೇಟಿ ನೀಡುತ್ತಾರೆ.  ಉದಾರ ಮನಸ್ಸಿನವರು ಎಲ್ಲ ಮತಗಳಲ್ಲಿಯೂ ಇದ್ದಾರೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!