ಸಂಪಾದಕೀಯ

ತಾಯಿಯ ಪ್ರೀತಿಗೆ 'ತಾಯ್ ಮಹಲ್'

ಇಂದು ಮಕ್ಕಳು ತಮ್ಮ ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ತಳ್ಳಿ ತಮ್ಮ ಕರ್ತವ್ಯ ಪ್ರಜ್ಞೆ ಮರೆಯುತ್ತಿದ್ದರೆ, ಇನ್ನು ಕೆಲವರಿಗೆ ತಮ್ಮ ಪ್ರೀತಿಯ ಮಡದಿಗಾಗಿ ಭವ್ಯ ಮಹಲನ್ನು ಕಟ್ಟಿ ಮೆರೆಯುವಾಸೆ. ತಾಜ್‌ಮಹಲ್ ಅದಕ್ಕೊಂದು ಉದಾಹರಣೆ. ಆದರೆ ಜನ್ಮ ನೀಡಿದ ತಾಯಿಯ ನೆನಪು ಸದಾ ಹಸಿರಾಗಿರಬೇಕೆಂದು ಬಯಸಿ, ತಾಯಿಗಾಗಿಯೇ ಒಂದು ಸ್ಮಾರಕ ನಿರ್ಮಿಸಿದ ವ್ಯಕ್ತಿ ವಿಭಿನ್ನವಾಗಿ ನಿಲ್ಲುತ್ತಾರೆ ಮತ್ತು ಗೌರವ ದರಗಳಿಗೆ ಪಾತ್ರರಾಗಿದ್ದಾರೆ. ಅಂತಹ ಒಬ್ಬ ಶ್ರೇಷ್ಠ ಪುರುಷನ ಕಥೆ ಇಲ್ಲಿದೆ.
ಮಾಧೋರಾವ್ ಸಿಂಧ್ಯ, ಮಹಾರಾಜ ಜೀಯಾಜಿ ರಾವ್‌ಸಿಂಧ್ಯನ ಏಕೈಕ ಪುತ್ರ. ಅವನ ತಾಯಿ ಜೀಜಾಬಾಯಿ ಅವನ ಮೇಲೆ ತುಂಬಾ ಪ್ರಭಾವ ಬೀರಿದ್ದಳು. ಧರ್ಮಶ್ರದ್ಧೆ ಮತ್ತು ಕರ್ತವ್ಯನಿಷ್ಠೆ ಅವನು ತನ್ನ ತಾಯಿಯಿಂದ ಕಲಿತ ಎರಡು ಮಹತ್ತರ ಗುಣಗಳು. ಮಾಧೋರಾವ್  1917ರಲ್ಲಿ ಇನ್ನೂ ಎಳೆ ವಯಸ್ಸಿನಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡ. ತಾಯಿಯ ಬಗ್ಗೆ ಅಪಾರ ಪ್ರೀತಿಹೊಂದಿದ್ದ ಮಾಧೋರಾವ್ ಆಕೆಯ ಸ್ಮರಣೆ ನಿತ್ಯವಾಗಿರಬೇಕೆಂದು ಬಯಸಿ, ಮಧ್ಯಪ್ರದೇಶದ ಶಿವಪುರದಲ್ಲಿ 'ಛತರಿ' ಎಂದು ಕರೆಸಿಕೊಳ್ಳುವ ಒಂದು ಭವ್ಯ ಮಹಲನ್ನು ಕಟ್ಟಿಸಿದ. ವಿಶಾಲವಾದ ಪ್ರದೇಶದಲ್ಲಿ ಕಟ್ಟಿಸಿರುವ ಈ ಮಹಲಿನಲ್ಲಿ ತನ್ನ ತಾಯಿಯ ಅಮೃತಶಿಲೆಯ ವಿಗ್ರಹವನ್ನು ಸ್ಥಾಪಿಸಿ ಪ್ರತಿದಿನ ಅಲ್ಲಿ ಬೆಳಿಗ್ಗೆ ವಿಗ್ರಹದ ಎದುರು ಶಿವನಾಮಸ್ಮರಣೆ, ಭಗವದ್ಗೀತೆ ವಾಚನಕ್ಕಾಗಿ ಏರ್ಪಾಡು ಮಾಡಿದ. ತನ್ನ ತಾಯಿ ಸ್ವೀಕರಿಸುತ್ತಿದ್ದ ಸರಳ ಆಹಾರವನ್ನು ನೈವೇದ್ಯ ಮಾಡಲು ಸಹ ಆದೇಶಿಸಿದ್ದ. ಸಂಜೆ ಮತ್ತೆ ಜಪಮಾಲೆ ಹಿಡಿದು ಧ್ಯಾನ, ನಂತರ ಅಮ್ಮನಿಗೆ ಪ್ರಿಯವಾಗಿದ್ದ ಪಾನ್ಬೀಡಾಗಳನ್ನು ರಾಜಮಾತೆ ಉಪಯೋಗಿಸುತ್ತಿದ್ದ ಪಾನ್ದಾನ್‌ನಲ್ಲಿಟ್ಟು ಅರ್ಪಿಸುವ ಸೇವೆಯೂ ನಡೆಯುತ್ತದೆ. ನಂತರ ಮಂದಿರಕ್ಕೆ ಬಾಗಿಲುಹಾಕಿ ವಿಶ್ರಾಂತಿ ನೀಡಲಾಗುತ್ತದೆ. ಈ ಮಹಲಿನಲ್ಲಿ ಆತನ ತಂದೆಯ ಭವ್ಯವಾದ ವರ್ಣಚಿತ್ರ ಅತ್ಯಂತ ಮನೋಹರವಾಗಿದೆ. ಮಹಲಿನ ಎದುರು ನಿರ್ಮಿಸಿರುವ ಸುಂದರವಾದ ಕೊಳದ ಮಧ್ಯೆ  ಒಂದು ಮಂಟಪ, ಅದರಲ್ಲಿ ನಂದಿ, ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲಿಯೂ ಪೂಜಾದಿಗಳು ನಡೆಯುತ್ತವೆ. ಈ ಪದ್ಧತಿ ಇಂದಿಗೂ ಇಲ್ಲಿ ನಡೆಯುತ್ತಿರುವುದು ಒಂದು ವಿಶೇಷವಾಗಿದೆ. ಮಾಧೋರಾವ್‌ನ ಮರಣಾನಂತರ ಅವನ ಮಗ ಜೀವಾಜಿರಾವ್ ತನ್ನ ತಂದೆಯ ಸ್ಮರಣಾರ್ಥ ಮತ್ತೊಂದು ಛತ್ರನ್ನು 1932ರಲ್ಲಿ ತಾಯ್‌ಮಹಲ್ ಎದುರು ನಿರ್ಮಿಸಿ ತನ್ನ ಪಿತೃಭಕ್ತಿಯನ್ನು ಮೆರೆದಿದ್ದಾನೆ. ಅಂಥ ತಾಯಿಯನ್ನು ಪಡೆದ ಮಗ, ಅಂತಹ ಮಗನನ್ನು ಪಡೆದ ಆ ತಾಯಿ ಇಬ್ಬರೂ ಧನ್ಯರು ಮತ್ತು ಮಾನ್ಯರು ಕೂಡ.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!