ಮಹಾಂತೇಶ ಎಂ.ಕೆ. ಹುಬ್ಬಳ್ಳಿ
ಈ ಸಲದ ಚುನಾವಣೆಯಲ್ಲಿ ಜ್ಯೋತಿಷಿಗಳಿಗೆ ಹೆಚ್ಚು ಮಹತ್ವ ಇಲ್ಲವಂತೆ ನಿಜಾನಾ?
ನೀನು ಆರ್.ಟಿ. ನಗರದ ಸ್ವಾಮೀಜಿ ಮನೆ ಕಡೆ ಹೋಗಿಲ್ಲ ಅಂತ ಕಾಣಿಸುತ್ತೆ!
ಗಾಯತ್ರಿ ಸುಧಾಕರ, ರಾಜಾಜಿನಗರ
ಈ ಸಲ ನೀವು ಯಾವ ಪಕ್ಷವನ್ನು ಬೆಂಬಲಿಸುತ್ತೀರಿ ಬಾಣಭಟ್ರೇ?
ಗೊತ್ತೇ ಇದೆಯಲ್ಲ, ಗೆಲ್ಲುವ ಪಕ್ಷವನ್ನ!
ಅಂತರಸಂತೆ ಮೋಹನ, ಸಿದ್ದರಬಾವಿ, ತುಮಕೂರು
ನೀವು ಈಗಲೂ ಗನ್ ಹಿಡಿದೇ ತಿರುಗಾಡ್ತೀರಾ?
ಹಾಗೇನಿಲ್ಲ, ಅದನ್ನು ಬಿಟ್ಟು ಮಾತ್ರ ತಿರುಗಾಡೋಲ್ಲ!
ಭಾಗ್ಯರವಿ, ಮಡಿಕೇರಿ
ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮಂಗ್ಯಾನ ಥರಾ ಪ್ರಶ್ನೆ ಕೇಳಿದರೆ?!
ಜೆ.ವಿ.ಎಂ.ಬಿ. ಸತ್ಯ, ಬಿಳೇಕಹಳ್ಳಿ, ಬೆಂಗಳೂರು
ಹುಡುಗಿಯರು ಚಿಕ್ಕ ಹೆಸರನ್ನೇಕೆ ಇಟ್ಟುಕೊಳ್ಳುತ್ತಾರೆ!
ನಿನ್ನ ಹೆಸರೂ ಪ್ರೇರಣೆಯಿದ್ದಿರಬಹುದು!
- ಬಾಣಭಟ್ಟ