ಸಂಪಾದಕೀಯ

ಮೋದಿ ಬಳಿಗೆ ಅಮೆರಿಕನ್ನರು

ಭಾರತೀಯ ಜನತಾ ಪಾರ್ಟಿಯ ಪ್ರಮುಖ ನಾಯಕ ಹಾಗೂ ಗುಜರಾತ್ ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಅಮೆರಿಕದ ವಾರ್ಟನ್ ಆರ್ಥಿಕ ವೇದಿಕೆ ಒಂದು ಸಮಾರಂಭಕ್ಕೆ ಆಹ್ವಾನಿಸಿದಾಗ, ಪೆನ್ಸಲ್ವೇನಿಯಾದ ಹಲವು ಭಾರತೀಯ ಸಂಜಾತರು ಪ್ರತಿಭಟಿಸಿದ್ದರಿಂದ ಮೋದಿಗೆ ಸರ್ಕಾರ ಅಮೆರಿಕದ ಪ್ರವೇಶಕ್ಕೆ ವೀಸಾ ಕೊಡಲಿಲ್ಲ.
   2005 ರಿಂದಲೂ ನರೇಂದ್ರ ಮೋದಿಗೆ ಅಮೆರಿಕದಿಂದ ಅನೇಕ ಆಹ್ವಾನಗಳು ಬರುತ್ತಿದ್ದರೂ ಸರ್ಕಾರ ಅವರಿಗೆ ವೀಸಾ ನಿರಾಕರಿಸುತ್ತಲೇ ಬಂದಿದೆ. ಅದಕ್ಕೆ ಕಾರಣ 2002 ರ ಗುಜರಾತ್ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಅವರ ಕೈವಾಡ ಇತ್ತು ಎನ್ನುವ ಆರೋಪವನ್ನು ಅನೇಕರು ಮಾಡುತ್ತಿರುವುದೇ.
   ಅಮೆರಿಕದ ಸರ್ಕಾರ ನರೇಂದ್ರ ಮೋದಿಗೆ ವೀಸಾ ಕೊಡದಿದ್ದರೇನಂತೆ ಅನೇಕ ಪ್ರತಿಷ್ಠಿತ ಅಮೆರಿಕದ ಪ್ರಜೆಗಳು ಭಾರತಕ್ಕೆ ಬಂದು ಮೋದಿ ಅವರನ್ನು ಭೇಟಿಯಾಗಿ ಸಂತೃಪ್ತರಾಗಿ ಹಿಂತಿರುಗುತ್ತಿದ್ದಾರೆ. ಅಮೆರಿಕಾದಿಂದ ಪ್ರಜೆಗಳಿಗೆ ಆ ಹಕ್ಕನ್ನಂತೂ ಅಲ್ಲಿನ ಸರ್ಕಾರ ಕಸಿದು ಕೊಳ್ಳುವುದು ಸಾಧ್ಯವಿಲ್ಲ. ಬುಧವಾರ-ಗುರುವಾರ, ಅಮೆರಿಕದ ಬಿಜೆಪಿ ಮಿತ್ರರ ವೇದಿಕೆಯ ನೆರವಿನಿಂದ ಹಲವು ರಿಪಬ್ಲಿಕನ್ ಸೆನೆಟರ್ಗಳು, ವಾಣಿಜ್ಯೋದ್ಯಮಿಗಳು ಭಾರತಕ್ಕೆ ಬಂದು ನರೇದ್ರ ಮೋದಿ ಅವರನ್ನು ಭೇಟಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಒಂದು ಪ್ರಮುಖ ಘಟನೆ.
   ಆ ತಂಡದಲ್ಲಿ ಇಲ್ಲಿನ ಪ್ರತಿನಿಧಿಗಳ ಸದನದಲ್ಲೇ ನರೆಂದ್ರ ಮೋದಿ ನೇತೃತ್ವದ ಗುಜರಾತ್ ಸಾಧಿಸಿದ ಪ್ರಗತಿಯನ್ನು ಮೆಚ್ಚಿ, ಅಭಿನಂದನಾ ಸಂದೇಶವನ್ನು ರವಾನಿಸಿದ್ದ ಪ್ರತಿನಿಧಿಯೂ ಇದ್ದಿದ್ದು ಗಮನಾರ್ಹ.
   ನರೇಂದ್ರ ಮೋದಿಯವರ ವಿಚಾರದಲ್ಲಿ ಅಭಿಮಾನವನ್ನು ಪ್ರದರ್ಶಿಸುವುದು ಅಥವಾ ಪ್ರತಿಭಟನೆ ಸಲ್ಲಿಸುವುದು ಬೇರೆ ವಿಚಾರ. ಆದರೆ ಅವರನ್ನು ಅಮೆರಿಕಕ್ಕೆ ಬರದಂತೆ ಹಟ ಮಾಡುವುದು ಬೇರೆ ವಿಚಾರ. ಈಗ ಬಂದಿದ್ದ ನಿಯೋಗ ಮತ್ತೆ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ, ಅಲ್ಲಿನ ಸರ್ಕಾರ ಏನು ಮಾಡುತ್ತೋ ನೋಡಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!