ಬೆಮೆಲ್ ದೇವೇಗೌಡ, ಮೈಸೂರು, 9481210017
ತಪ್ಪಾದ ಹೇಳಿಕೆ ನೀಡಿ, ನಂತರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳುವ ಜಾಣಪೆದ್ದರಿಗೆ ಏನೆನ್ನಬೇಕು?
ರಾಜಕಾರಣಿ ಎನ್ನಬೇಕು!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಪತ್ರಿಕಾ ಸಂಪಾದಕರಿಗೆ ತುಂಬಾ ಇಷ್ಟವಾದದ್ದು ಯಾವುದು?
'ಬರ'ಗಾಲ
ಹೊರೆ ಬಿಸಾಕಿ, ಸೈಕಲ್ ಇಳಿದು, ಫ್ಯಾನ್ ಕೆಳಗೆ
ಕುಳಿತ ಪೂಜಾಳ ಗುಟ್ಟೇನು?
ಎಷ್ಟೇ ಫ್ಯಾನು ಹಾಕಿದರೂ ರಾಯಚೂರಿನ ಹವಾ ಮಾತ್ರ ಬದಲಾಗಲಿಲ್ಲ ನೋಡಿ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಐಟಂ ಸಾಂಗಿಗೆ ಹುಡುಗಿಯರನ್ನೇ ಏಕೆ ಕುಣಿಸುತ್ತಾರೆ?
ಹುಡುಗರು ಜೊಲ್ಲು ಸುರಿಸುತ್ತಾ ನೋಡುತ್ತಾರೆ ಎಂಬ ಕಾರಣಕ್ಕೆ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಪಾಂಡವರು ಹಾಗೂ ಕೌರವರಿಗೂ ನಡೆದ 'ಕುರುಕ್ಷೇತ್ರ' ಯುದ್ಧದ ಕಾಲದಲ್ಲಿ ಮೊಬೈಲ್ ಇದ್ದಿದ್ರೆ ಏನಾಗ್ತಿತ್ತು?
ಚಕ್ರವ್ಯೂಹದೊಳಗೆ ನುಗ್ಗಿದ ಅಭಿಮನ್ಯು ಗೂಗಲ್ ಮ್ಯಾಪ್ ಬಳಸಿ ಹೊರಬರಬಹುದಿತ್ತು!
-ಬಾಣಭಟ್ಟ