ಸಂಪಾದಕೀಯ

ರಾಜಕೀಯಕ್ಕೆ ಧುಮುಕಿದರೆ ಬೇಗ ಶ್ರೀಮಂತರಾಗಬಹುದಾ?

ಲಕ್ಷ್ಮೀ ಬರ್ಕ್‌ಲಿ ರಮೇಶ್, ಕಿರಗಂದೂರು
ರಾಜಕೀಯಕ್ಕೆ ಧುಮುಕಿದರೆ ಬೇಗ ಶ್ರೀಮಂತರಾಗಬಹುದಾ?
ಬರೀ ಧುಮುಕಿದರೆ ಆಗದು, ಈಜುವುದಕ್ಕೂಗೊತ್ತಿರಬೇಕು!

ವಿ. ಹೇಮಂತಕುಮಾರ್, 9035992900
ಕೊಡಗಿನ ಕಿತ್ತಳೆ ಹಣ್ಣಿನಂತಿದ್ದ ಅವಳ ಕೆನ್ನೆ ಪೈನಾಪಲ್ ತರಹ ಆಗಿದೆಯಲ್ಲ ಏಕೆ?
ಒಡೆದ ಹಲಸಿನ ಹಣ್ಣಿನಂತಿರುವ ಹುಡುಗರ ಮುಖ ನೋಡಿ ನೋಡಿ ತಾನು ಬದಲಾದೆ ಎಂಬುದವಳ ವಿವರಣೆ!

ರಮೇಶ್ ಭಟ್ ಆವರ್ಸೆ, 9164276058
ಐ ಲವ್ ಯು ಎಂಬ ಪದ ಎಲ್ಲಿಂದ ಬಂದಿದ್ದು ಗೊತ್ತಾ?
ಬಹುಶಃ ಚೀನಾದಿಂದಲೇ ಇರಬಹುದು. ಎಲ್ಲ ಚೀನಾ ಐಟಮ್‌ಗಳ ಹಾಗೆಯೇ ಇದಕ್ಕೂ ವಾರಂಟಿ-ಗ್ಯಾರಂಟಿ ಏನೂ ಇಲ್ಲ!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಎಲ್ಲ ಕಾಲೇಜುಗಳಲ್ಲಿ ಮುಂದಿನ ಬೆಂಚುಗಳಲ್ಲೇ ಯಾಕೆ ಹುಡ್ಗೀರನ್ನ ಕೂರಿಸ್ತಾರೆ?
ಹಾಗಾದರೂ ಕ್ಲಾಸಿನಲ್ಲಿ ಕುಳಿತಿರುವ ಹುಡುಗರು ಎಲ್ಲೇಲ್ಲೋ ನೋಡುವುದನ್ನು ಬಿಟ್ಟು ಕರಿ ಹಲಗೆ ದಿಕ್ಕಿನಲ್ಲೇ ಮುಖ ಇಡುವಂತಾಗಲಿ ಎಂದು.

ಕೆ.ಎಂ.ಲಿಂಗರಾಜು, ನಂಜನಗೂಡು 9916021365
ಮತದಾರನ ಮತ ಎಲ್ಲಿಯ ತನಕ ಅಮೂಲ್ಯವಾಗಿರುತ್ತದೆ?
ತನ್ನ ಮತಕ್ಕೆ ಮೌಲ್ಯವಿದೆ ಎಂದು ಮತದಾರ ತಿಳಿದಿರುವವರೆಗೂ..

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ