ಸಂಪಾದಕೀಯ

ನೇಣುಶಿಕ್ಷೆಗೆ ಒಳಪಡಿಸುವಾಗ ಮುಖಕ್ಕೆ ಕಪ್ಪುಬಟ್ಟೆ ಏಕೆ ತೊಡಿಸ್ತಾರೆ?

ವಿ. ಹೇಮಂತಕುಮಾರ, 9035992900
ಅವಳನ್ನು ಕಂಡಾಗಿನಿಂದ ಮನಸ್ಸು ಗಾಳಕ್ಕೆ ಸಿಕ್ಕ ಮೀನಾಗಿ ಚಡಪಡಿಸುತ್ತಿದೆಯಲ್ಲಾ?
ಮುಂದೆ ಬೋಳುತಲೆ ಹೇನಿನಂತೆ ಚಡಪಡಿಸಬೇಕಾಗಿ ಬರಬಹುದು ಹುಶಾರ್!

ಫ್ಯಾಷನ್ ಡಿಸೈನರ್ ಮಧು, 9945737427
ಚರ್ಮದ ಬಣ್ಣವೇ ಮನುಷ್ಯನ ಸೌಂದರ್ಯದ ಮಾನದಂಡ ಎನ್ನುವುದಾದರೆ, ಬಿಳಿ ಬಣ್ಣ ಶ್ರೇಷ್ಠವೋ ಕಪ್ಪು ಬಣ್ಣ ಶ್ರೇಷ್ಠವೋ?
ಬಿಳಿ ಶ್ರೇಷ್ಠವಲ್ಲ ಅಂದರೆ ಫೇರ್ ಆ್ಯಂಡ್ ಲವ್ಲಿ ಕಂಪನಿಯವರು ಬೇಜಾರು ಮಾಡ್ಕೋತಾರಲ್ಲ!

ಓಂ ಚನ್ನೇಶ್ ಅರಬಿಳಚಿಕ್ಯಾಂಪ್, 8861404122
ಪ್ರೀತಿ ಪ್ರೇಮದ ವಿಷಯದಲ್ಲಿ ಮೊದಲು ಸೋಲುವುದು ಗಂಡೋ? ಹೆಣ್ಣೋ?
ಯಾರು ಸೋತರೂ ಪರಿಣಾಮ ಒಂದೇ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನೇಣುಶಿಕ್ಷೆಗೆ ಒಳಪಡಿಸುವಾಗ ಮುಖಕ್ಕೆ ಕಪ್ಪುಬಟ್ಟೆ ಏಕೆ ತೊಡಿಸ್ತಾರೆ?
ನೇಣು ಹಾಕುವಾಗ ಯಾರು ಯಾರು ಇದ್ದರು ಅಂತ ನೋಡಿಕೊಂಡು ಭೂತವಾಗಿ ಬಂದು ಕಾಟ ಕೊಡದಿರಲಿ ಅಂತ.

ಜೆ.ಪಿ. ನಾಗರಾಜ, ದಾವಣಗೆರೆ, 9901193811
ದೇವರೇ ನನ್ನ ಗಂಡ ಅಂದ ಅಕ್ಕಮಹಾದೇವಿ ಸಂತಳಾದಳು. ಗಂಡಸರು?
ದೇವತೆಯಂತಹ ಹೆಂಡತಿ ಸಿಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ