ಕೋಲ್ಯ ಮತ್ತು ತಿಮ್ಮ ಬೇಟೆಯಾಡಲು ಕಾಡಿನಲ್ಲಿ ಅಲೆಯುತ್ತಿದ್ದರು. ತಿಮ್ಮ ಅಚಾನಕ್ಕಾಗಿ ಕುಸಿದು ಬಿದ್ದ. ಆತನ ಉಸಿರಾಟ ನಿಂತಂತಿತ್ತು, ಮೈ ಬಣ್ಣ ಕಪ್ಪಾಗಿತ್ತು. ಕೂಡಲೇ ಕೋಲ್ಯ ಹತ್ತಿರದ ಆಸ್ಪತ್ರೆಗೆ ಫೋನ್ ಮಾಡಿದ.
ಕೋಲ್ಯ: (ಅಳುತ್ತಾ) 'ನನ್ನ ಗೆಳೆಯ ಸತ್ತು ಹೋಗಿದಾನೆ. ಪ್ಲೀಸ್ ಹೆಲ್ಪ್ ಮಿ. ನಾನೇನು ಮಾಡ್ಲಿ?'
ಆಸ್ಪತ್ರೆಯಿಂದ: ಗಾಬರಿ ಆಗಬೇಡಿ ಸರ್. ನಾನು ನಿಮಗೆ ಸಹಾಯ ಮಾಡಬಲ್ಲೆ. ಮೊದಲು ನಿಮ್ಮ ಗೆಳೆಯ ಸತ್ತಿರೋದನ್ನ ಖಾತರಿ ಪಡಿಸಿಕೊಳ್ಳಿ.
(ಒಂದು ನಿಮಿಷದ ನಿಶಬ್ಧದ ನಂತರ ಜೋರಾಗಿ ಗುಂಡಿನ ಸದ್ದಾಯಿತು)
ಕೋಲ್ಯ: (ಅಳುತ್ತಾ)ಶೂಟ್ ಮಾಡಿದೀನಿ. ಈಗ ಪಕ್ಕಾ ಸತ್ತಿದಾನೆ. ಮುಂದೇನು ಮಾಡ್ಲಿ?