ಕೆಲವು ನಾಯಿಗಳು ಹೋರಿಯ ಹಿಂದೆ ಸದಾ ತಿರುಗುತ್ತಿರುತ್ತವೆ ಯಾಕೆ?
ಹೋರಿ ಬೀಜ ಬೀಳಬಹುದೆಂಬ ಭ್ರಮೆಯಲ್ಲಿ!
ಶಿವ, ಕುಕ್ಕೆ ಸುಬ್ರಹ್ಮಣ್ಯ
ಎರಡು ಗಡಿಯಾರಗಳು ಒಂದೇ ವೇಳೆಯನ್ನು ತೋರಿಸುವುದಿಲ್ಲ ಯಾಕೆ?
ಟೈಮ್ ಸೆಟ್ ಮಾಡಿದವರು ಬೇರೆ ಬೇರೆಯಾದ್ದರಿಂದ!
ಬಿ.ಎಂ. ಪರಶಿವಮೂರ್ತಿ ವಿಜಯನಗರ, ಬೆಂಗಳೂರು
ಪೂರ್ವಜನ್ಮದಲ್ಲಿ ಪುಣ್ಯ ಮಾಡಿದವನಿಗೆ ಒಳ್ಳೆ ಹೆಂಡ್ತಿ ಸಿಕ್ತಾಳಂತೆ. ಪಾಪ ಮಾಡಿದವನಿಗೆ?
ಈಗ ಸ್ವಲ್ಪ ಬದಲಾಗಿದೆ. ಪೂರ್ವಜನ್ಮದಲ್ಲಿ ಪುಣ್ಯ ಮಾಡಿದವನಿಗೆ ಹೆಂಡತಿ ಸಿಗುತ್ತಾಳೆ.
ಮನೆ ಬಿಟ್ಟು ಹೋದ ಪ್ರೇಮಿಗಳು ಬರಿಗೈಲಿ ಹೋದ್ರೂ ಕಟ್ಟಿಕೊಂಡು ಹೋದ್ರು ಅಂತಾರಲ್ಲ?
ಅವರು ಬಸ್ಸಲ್ಲಿ ಹೋದ್ರೂ ಓಡಿ ಹೋದ್ರು ಅಂತಾರಲ್ಲ ಹಾಗೆ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮನೆ ಗೆಲ್ಲೋರು ಮಾರು ಗೆಲ್ತಾರಾ ಬಾಣಭಟ್ರೇ?
ಹೌದು ಅಂದ್ರೆ ಮಾರು ಗೆದ್ದೋನು ಊರು ಗೆಲ್ತಾನಾ ಅಂತ ನೀವು ಪ್ರಶ್ನಿಸಬಹುದು.
ರಮೇಶ್ ಭಟ್ ಆವರ್ಸೆ, ಮೈಸೂರು, 9164276058
-ಬಾಣಭಟ್ಟ