ಸತ್ಯಕ್ಕಾಗಿ ಆಗ್ರಹಿಸಿದ ಸತ್ಯಾಗ್ರಹದ ರೂವಾರಿ
ಇವರು ದೇಶಕ್ಕಾಗಿ ಮಡಿದರು. ಇವರ ಹೆಸರು ಹೇಳುತ್ತಾ ಕೆಲವರು ಸ್ವಂತಕ್ಕಾಗಿ ಮಾಡಿಕೊಂಡರು
ಎಲ್ಲರನ್ನೂ ಒಟ್ಟಾಗಿಸಿದ ಗಾಂಧಿಯೇ ಇಬ್ಭಾಗಕ್ಕೂ ಸಾಕ್ಷಿಯಾಗಿದ್ದು ವಿಪರ್ಯಾಸ
ಮುಂದಾಗಿ ಹೋದವರು ಸಾಯುತ್ತಾರೆ. ಸೆರಗಿನ ಹಿಂದೆ ಅವಿತವರು ಮೊದಲ ಪ್ರಧಾನಿಯಾಗುತ್ತಾರೆ
ಭಾರತವೆಂಬ ಮಾಣಿಕ್ಯವನ್ನು ಮಂಗನ ಕೈಯಲ್ಲಿ ಕೊಟ್ಟು ಹೋದ ಪುಣ್ಯಾತ್ಮ
ಇವರು ಹೇಳಿದ್ದನ್ನು ಅನುಷ್ಠಾನ ಮಾಡುವುದು ಕಷ್ಟವೆಂದು ನಾವು ಅದರ ಬದಲು ಅವರ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ
ರಾಜಕಾರಣಿಗಳಿಗೆ ಗಾಂಧಿ ಭಕ್ತಿಯೆಂದರೆ ಗಾಂಧಿ ಚಿತ್ರವಿರುವ ನೋಟಿನ ಭಕ್ತಿ
ಗಾಂಧಿ ಟೋಪಿ ಎಂಬುದು ಇವತ್ತು ಬೇರೆಯವರಿಗೆ ಟೋಪಿ ಹಾಕುವವರು ತಲೆ ಮರೆಸಿಕೊಳ್ಳುವ ಸಾಧನ
ದೇಶಭಕ್ತಿಯೆಂಬ ಗಂಧವುಳ್ಳವರೆಲ್ಲಾ ಗಾಂಧಿಗಳೇ
ಗಾಂಧಿಯ ಕೋಲಿದು ನೆಹರೂ ಕುದುರೆ
ಗಾಂಧಿಯ ಹೆಸರಲ್ಲಿ ಎಲ್ಲರೂ ತಾ... ತಾ... ಎನ್ನುವವರೇ
ರೈಲಿನಲ್ಲಿ ನಿಲ್ಲಲೂ ಜಾಗವಿರದ ಬೋಗಿಯನ್ನು ಗಾಂಧಿ ಕ್ಲಾಸ್ ಎನ್ನಲಾಗುತ್ತದೆ
ಬೀದಿಗೆಲ್ಲ ಗಾಂಧಿ ಹೆಸರಿಟ್ಟು ಗಾಂಧಿಯನ್ನು ಬೀದಿಗೆ ತಂದಿದ್ದೇವೆ
ಮಧ್ಯರಾತ್ರಿಯಲ್ಲಿ ಮಹಿಳೆ ಓಡಾಡುವ ಕನಸು ಕಂಡದ್ದು ಕೆಲವು ಅರ್ಥಗಳಲ್ಲಿ ಇಂದು ಸತ್ಯವಾಗಿದೆ
ರಾಮ ರಾಜ್ಯ ಮತ್ತು ಗ್ರಾಮ ಸ್ವರಾಜ್ಯದ ಕನಸುಗಾರ
ವಿಶ್ವನಾಥ ಸುಂಕಸಾಳ
vishwasunkasal@yahoo.com