ಹಸೆ ಮೇಲೆ ಬಿದ್ರೆ ಬರುವುದು ನಿದ್ರೆ- ಎನ್ನುವವನಿಗೆ ಬೇಡದ್ದು
ಭೌತಿಕ ಸಂಪತ್ತು ಹೆಚ್ಚಿದಂತೆ ನಿದ್ರಾ ಸಂಪತ್ತು ಕಡಿಮೆಯಾಗುತ್ತದೆ. ಆಗ ಇದರ ಅಗತ್ಯ ಉಂಟಾಗುತ್ತದೆ
ಸಾಲ ಜಾಸ್ತಿಯಾದರೂ ಇದು ಬೇಕಾಗುತ್ತದೆ
ನಿದ್ರೆಯ ಬಗ್ಗೆಯೇ ತಲೆ ಕೆಡಿಸಿಕೊಂಡು ನಿದ್ರೆಯೇ ಬಾರದಿದ್ದಾಗ ಕೆಲವರು ಮೊರೆ ಹೋಗುವ ಮಾತ್ರೆ
ಕೃತಕ ಪರಿಹಾರಕ: ದೀರ್ಘ ಅಪಾಯಕಾರಕ
ನಿದ್ರಾ ಹೀನತೆಯ ಗೋಳಿಗೆ ತಾತ್ಕಾಲಿಕ ಪರಿಹಾರವೇ ಈ ಗುಳಿಗೆ
ಶ್ರೀಮಂತನ ಆಹಾರವೆ ಇದು,ನಿರಾಹಾರಿಯಾಗಿದ್ದರೂ ಬಡವನಿಗೆ ಇದು ಬೇಕಿಲ್ಲ
ಮದುವೆಯಾದ ಮೇಲೆ ಇದರ ಅಗತ್ಯ ಹೆಚ್ಚು
ನಿದ್ರೆ ಬಂದಾಗ ಮಾಡದೇ, ಮೂಡು ಬಂದಾಗ ಮಲಗಿದರೆ ಇದರ ಅಗತ್ಯ ಬೀಳುವುದು
ಶಸ್ತ್ರ ಚಿಕಿತ್ಸೆಗಳಲ್ಲಿ ಬಳಸುವ ಮಂಪರು ಮದ್ದು
ಇದನ್ನು ತೆಗೆದುಕೊಳ್ಳುವ ಹಂತ ತಲುಪಿದ್ದೀರೆಂದರೆ ಒಂದೋ ವಯಸ್ಸಾಗಿರಬೇಕು ಅಥವಾ ನಿದ್ರಾ ದಾರಿದ್ರ್ಯ ಒದಗಿರಬೇಕು
ಪ್ರೇಮಿಗಳ ಮತ್ತು ಅವಿವಾಹಿತರ ಅನಿವಾರ್ಯತೆ
ವಿಶ್ವನಾಥ ಸುಂಕಸಾಳ