ಶಿಕ್ಷಕನ ಕೆಟ್ಟ ಕೈ ಬರಹದ ಪ್ರದರ್ಶನಾ ಸಾಧನ
ವಿದ್ಯಾರ್ಥಿಗಳ ಎಲ್ಲ ಚೇಷ್ಟೆಗಳ ಮೂಕ ಪ್ರೇಕ್ಷಕ
ಟೀಚರ್ ಮತ್ತು ವಿದ್ಯಾರ್ಥಿಗಳ ನಡುವೆ ಹಗೆ ನಿರ್ಮಿಸುವ ಹಲಗೆ
ಕಪ್ಪು ಹಲಗೆಯ ಒಂದು ಸಮಸ್ಯೆಯೆಂದರೆ ಇದರ ಎದುರು ನಿಂತವರು ಕೆಲವೊಮ್ಮೆ ಕಾಣಿಸುವುದಿಲ್ಲ
ಎಲ್ಲ ಅಂಗಡಿಗಳ ಶಿರೋನಾಮೆ
ಬಸ್ಗಳ ಹಣೆಬರಹ
ಭಾಷೆಯ ಯೂಪ (ಬಲಿ ಸ್ಥಾನ)
ಆಗಾಗ ಅಳಿಸಿ ಹೋಗುವುದರಿಂದ ಅಕ್ಷರವೂ ಅಕ್ಷಯವಲ್ಲ ಎಂಬುದನ್ನು ಸಾಬೀತುಪಡಿಸುವ ಸಾಧನ
ಅಂಗಡಿ ಪ್ರಾರಂಭಿಸುವುದಕ್ಕಿಂತಲೂ ಮೊದಲೇ ಬೋರ್ಡ್ ಬರೆಸಿದಂತೆ
ಯಾವತ್ತೂ ಲಕ ಲಕ ಹೊಳೆಯುವಂತೆ ಕಾಪಾಡಿಕೊಳ್ಳಬೇಕಾದ ಫಲಕ
ವಾಹನ ಸವಾರರ ಲಕ್ಷ್ಯ ಬದಿಗೆ ಸೆಳೆಯುವ ಜಾಹೀರಾತು ದರ್ಶಕ
ನಟಿಮಣಿಗಳು ವಿವಿಧ ಆಯಾಮಗಳಲ್ಲಿ ದೇಹವನ್ನು ಗಾಳಿಗೆ ಒಡ್ಡಿದ ಚಿತ್ರವನ್ನು ಹೊಂದಿರುವ ಪ್ರದರ್ಶಕ
ಸೈನ್ ಬೋರ್ಡ್ಗಳಲ್ಲಿನ ಭಾಷೆ, ಸಾಹಿತ್ಯದ ಯಾವ ಪ್ರಕಾರಕ್ಕೂ ಸೇರುವುದಿಲ್ಲ
ಪ್ರಯಾಣವನ್ನು ವಿನೋದಮಯಗೊಳಿಸುವ ಶಕ್ತಿ ಇವಕ್ಕಿವೆ
ತಪ್ಪಿಲ್ಲದ ಬೋರ್ಡ್ ಇದ್ದರೆ ಅದು ಅಪ್ಪಿತಪ್ಪಿಯೇ ಆಗಿರಬೇಕು
ವಿಶ್ವನಾಥ ಸುಂಕಸಾಳ