ಮಡಿ
ಪೂಜಾ ವಸನ (ವಸ್ತ್ರ). ವಾಸನೆ ಬರುವಂತಿರುವುದೇ ಹೆಚ್ಚು
ಪ್ರಾಣಾಹುತಿ
ಜೀವಾರ್ಪಣೆ
ಒಂದು ನಿರ್ದಿಷ್ಟ ಉದ್ದೇಶಕ್ಕೆ ಪ್ರಾಣ ತೆರುವುದಕ್ಕೆ ಹೀಗೆನ್ನುತ್ತಾರೆ
ಕೊನೆಯ ಬಾರಿ ಉಸಿರನ್ನು ಎಳೆದುಕೊಳ್ಳುವುದು ಅಥವಾ ಉಸಿರು ಬಿಡುವುದು
ಮಡದಿಗಾಗಿ ಮಾಡಿಕೊಂಡ ಆತ್ಮಹತ್ಯೆ
ಮನೆಯ ಮಾಡು ಕುಸಿದು ಬಿದ್ದು ಆದ ಅನಾಹುತದಲ್ಲಿ ಸಂಭವಿಸಿ ಉಂಟಾದ ಸಾವು
ಮಾಡಲಾಗದವನು ಮಡಿಯುತ್ತಾನೆ. ಆಗುವವನು ದುಡಿಯುತ್ತಾನೆ
ಉತ್ತರ
ಪ್ರಶ್ನೆಯ ಪುತ್ರ
ಫಟ್ ಅಂತ ಕೇಳಿದ್ದಕ್ಕೆ ಥಟ್ ಅಂತ ಹೇಳಬೇಕಾದದ್ದು
ಇದರಿಂದಲೇ ಕೆಲವರು ಥರ ಥರ ನಡುಗುತ್ತಾರೆ
ರಾಷ್ಟ್ರೀಯ ಪಕ್ಷದವರಿಗೆ ಯಾವ ಪ್ರಶ್ನೆ ಕೇಳಿದರೂ ನೋಡುವ ದಿಕ್ಕು
ಕೆಲವು ಪ್ರಶ್ನೆಗಳಿಗೆ ನಿರುತ್ತರವೇ ಉತ್ತರ
ದಕ್ಷಿಣೆ ತೆತ್ತರೆ ಕೆಲವೊಮ್ಮೆ ಉತ್ತರ ದೊರೆಯುತ್ತದೆ
ಸಂಸಾರವೇ ಒಂದು ಪ್ರಶ್ನೋತ್ತರ ಕಲಾಪ. ಉತ್ತರ ಗೊತ್ತಿಲ್ಲದಿದ್ದರೆ ಶೂನ್ಯವೇಳೆ
ಜೀವನವೆಂಬ ಪ್ರಶ್ನೆ ಪತ್ರಿಕೆಗೆ ಜೀವಿತವೇ ಉತ್ತರ
ಪ್ರಶ್ನೆ ಹೊಳೆದಷ್ಟು ಸುಲಭದಲ್ಲಿ ನಮಗಿದು ಹೊಳೆಯುವುದಿಲ್ಲ
-ವಿಶ್ವನಾಥ ಸುಂಕಸಾಳ
vishwasunkasal@yahoo.com