ಹಣ
ಕಣಕಣವನ್ನೂ ಮಾರಿ ಗಳಿಸುವಂಥದ್ದು
ಇದಿಲ್ಲದಿದ್ದರೆ ಕಿಸೆಯೆಲ್ಲ ಭಣಭಣ
ಹೂಣರು ಬೇರೆಯವರನ್ನು ಆಕ್ರಮಿಸಿ ಸಂಪಾದಿಸಿದ್ದು
ಕ್ಷಣಕ್ಷಣವೂ ಕೆಲವರು ತುಡಿಯುವುದು ಇದಕ್ಕಾಗಿಯೇ
ಹಣವಿಲ್ಲದವ ಕೊಳೆಯದ ಹೆಣ
ಕೆಲವರ ಪಂಚ ಪ್ರಾಣಗಳಲ್ಲಿ ಇದೂ ಒಂದು
ದಾನ ಮಾಡಿ ಪುಣ್ಯ ಗಳಿಸಬಹುದಾದ ಧನ
ಝಣ ಝಣ ಕಾಂಚಾಣ
ಹಣದ ಬೆಲೆ ಸಾಲ ತೀರಿಸುವಾಗ ತಿಳಿಯುತ್ತದೆ
ಆಯೇ ದುಖಮ್, ವ್ಯಯೇ ದುಖಮ್
ಕೆಲವರ ಚಿತ್ತ ಅತ್ತ ಇತ್ತ ಹರಿಯದಿರಲು ಕಾರಣವಾಗುವ ವಿತ್ತ
ಹಣದ ಮೂಲಕ ನಡೆಸುವ ಯುದ್ಧಕ್ಕೆ ಹಣಾ-ಹಣಿ ಎನ್ನಬಹುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com