ಸಂಪಾದಕೀಯ

ಇಂತಹ ಸರಳ ಬದುಕು ಯಾರು ಬಾಳಿದ್ದಾರೆ?

ಇಂದು ಚುನಾವಣೆಗೆ ಸ್ಫರ್ಧಿಸಿರುವವರ ಆಸ್ತಿಯ ಘೋಷಣೆಯನ್ನು ಪ್ರತಿದಿನ ಪತ್ರಿಕೆಗಳಲ್ಲಿ ನೋಡಿದರೆ, ಹೆಚ್ಚಿನವರು ಕೋಟ್ಯಾಧೀಶರು...

ಇಂದು ಚುನಾವಣೆಗೆ ಸ್ಫರ್ಧಿಸಿರುವವರ ಆಸ್ತಿಯ ಘೋಷಣೆಯನ್ನು ಪ್ರತಿದಿನ ಪತ್ರಿಕೆಗಳಲ್ಲಿ ನೋಡಿದರೆ,  ಹೆಚ್ಚಿನವರು ಕೋಟ್ಯಾಧೀಶರು, ಈಗಾಗಲೇ ಅಧಿಕಾರದ ರುಚಿಯನ್ನು ನೋಡಿದವರು, ರಾಜಕೀಯ ಕ್ಷೇತ್ರದಲ್ಲಿ ಸೇವೆಗಿಂತ ಸ್ವಾರ್ಥಕ್ಕಾಗಿ ಸ್ಫರ್ಧಿಸುವವರೇ ಹೆಚ್ಚು. ಚುನಾವಣೆಯಿಂದ ಚುನಾವಣೆಯವರೆಗೆ ಅವರ ಸಂಪತ್ತು ಅದೆಷ್ಟೋ ಪಾಲು ಹೆಚ್ಚಾಗುತ್ತಾ ಹೋಗುತ್ತಿದೆ. ಪರಸ್ಪರ ಕೆಸರೆರೆಚುವುದರಲ್ಲಿ ನಿರತರಾಗಿರುವ ಇವರನ್ನೆಲ್ಲ -ನೋಡಿದರೆ ದುಃಖವಾಗದಿರದು. ಆದರೆ, ಸರಳತೆ, ಸಜ್ಜನಿಕೆ, ಸಚ್ಚಾರಿತ್ರ್ಯ ಹೊಂದಿರುವವರ ಸಂಖ್ಯೆ ರಾಜಕೀಯದಲ್ಲಿ ಇತ್ತೀಚೆಗೆ ತುಂಬಾ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಇಂತಹವರ ನಡುವೆ ನಮಗೆ ಎದ್ದು ಕಾಣುವ ವ್ಯಕ್ತಿತ್ವ ಲಾಲ್ ಬಹಾದ್ದೂರ್ ಶಾಸ್ತ್ರಿಯವರದು. ಈ ಚುನಾವಣಾ ವೇಳೆಯಲ್ಲಿ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಒಬ್ಬ ವ್ಯಕ್ತಿ ಅಧಿಕಾರದ ಗೌರಿಶಂಕರವೇರಿದರೂ ಅತ್ಯಂತ ಪ್ರಾಮಾಣಿಕ ಮತ್ತು ಸರಳ ಬದುಕನ್ನು ಬಾಳಿದ ರೀತಿಯನ್ನು ನೋಡಿದರೆ, ಶಾಸ್ತ್ರಿಯಂತಹವರು ನಮ್ಮ ದೇಶದಲ್ಲಿ ಇದ್ದರಾ ಎಂದು ಅಚ್ಚರಿಯಾಗುತ್ತದೆ. ನಮ್ಮ ಮಕ್ಕಳಿಗೆ ಶಾಸ್ತ್ರಿಯವರ ಬಗ್ಗೆ ಹೇಳಿದರೆ, ಖಂಡಿತಾ ನಂಬಲಾರದ ಸ್ಥಿತಿಯನ್ನು ನಾವೀಗ ಹೊಂದಿದ್ದೇವೆ. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಗಳಾಗಿದ್ದಾಗ ಅವರ ಮನೆಗೆ ತುಂಬಾ ಪತ್ರಿಕೆಗಳು ಬರುತ್ತಿದ್ದವು. ಒಂದು ತಿಂಗಳಾದ ಮೇಲೆ ಪೇರಿಸಿಟ್ಟಿದ್ದ ಆ ಪತ್ರಿಕೆಗಳು ರದ್ದಿ ಅಂಗಡಿಗೆ ಕಳುಹಿಸಲ್ಪಡುತ್ತಿದ್ದವು. ಅದಕ್ಕಾಗಿ ಶಾಸ್ತ್ರಿಯವರು ತಮ್ಮ ಸಹಾಯಕನಿಗೆ ಪತ್ರಿಕೆಗಳನ್ನು ರದ್ದಿಗೆ ಹಾಕಿ ಬಂದ ಹಣವನ್ನು ಸರ್ಕಾರದ ಲೆಕ್ಕಕ್ಕೆ ಸೇರಿಸಲು ಆದೇಶಿಸುತ್ತಿದ್ದರು. ಏಕೆಂದರೆ, ಸರ್ಕಾರದ ವೆಚ್ಚದಲ್ಲಿ ಪ್ರಧಾನಿಯವರ ನಿವಾಸಕ್ಕೆ ಬರುತ್ತಿದ್ದ ಪತ್ರಿಕೆಗಳು ರದ್ದಿಯ ರೂಪವನ್ನು ಪಡೆದರೂ ಸಹ ಅವು ಸರ್ಕಾರದ ಸ್ವತ್ತೇ ಆಗಿದ್ದವು. ಹೀಗಾಗಿ ಅದರಿಂದ ದೊರೆಯುವ ಅಲ್ಪ ಹಣವೂ ಸಹ ಸರ್ಕಾರದ ಬೊಕ್ಕಸಕ್ಕೆ ಹೋಗಬೇಕೆಂಬ ನಿಲುವನ್ನು ಹೊಂದಿದ್ದರು. ನಂತರ ಈ ಬಗ್ಗೆ ತಮ್ಮ ಸಚಿವ ಸಂಪುಟದ ಎಲ್ಲ ಸಚಿವರಿಗೆ ಮತ್ತು ಸರ್ಕಾರದಿಂದ ಪತ್ರಿಕೆ ಪಡೆಯುವ ಎಲ್ಲ ಅಧಿಕಾರಿಗಳಿಗೆ ಒಂದು ಸುತ್ತೋಲೆ ಕಳುಹಿಸಿ, ಪ್ರತಿಸಾರಿ ರದ್ದಿ ಅಂಗಡಿಗೆ ಪತ್ರಿಕೆಗಳನ್ನು ಮಾರಿದಾಗ ದೊರಕುವ ಹಣವನ್ನು ಸರ್ಕಾರದ ಖಜಾನೆಗೆ ಪಾವ್ತಿ ಮಾಡಬೇಕೆಂದು ಆದೇಶಿಸಿದ್ದರು. ಅವರ ಪ್ರಕಾರ, ಸರ್ಕಾರ ಪತ್ರಿಕೆಗಳಿಗಾಗಿ ವೆಚ್ಚ ಮಾಡುವ ಹಣ ಜನಸಾಮಾನ್ಯರದ್ದು. ಆದ್ದರಿಂದ ಜನರು ಲೆಕ್ಕ ಕೇಳಿದರೆ ಕೊಡಬೇಕಾದದ್ದು ಸರ್ಕಾರದ ಕರ್ತವ್ಯವೆಂದು ತಿಳಿದಿದ್ದರು. ಸಣ್ಣ ಸಣ್ಣ ವಿಷಯಕ್ಕೂ ಪ್ರಾಧಾನ್ಯ ನೀಡಿ, ಅವರು ನಡೆದುಕೊಳ್ಳುತ್ತಿದ್ದ ರೀತಿ ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿದೆ. ಪ್ರಧಾನಿಯಾಗಿದ್ದಾಗ ಒಂದು ಮಧ್ಯಮ ವರ್ಗದ ಮನೆಯಲ್ಲಿ ತಮ್ಮ ನಿವಾಸ ಮಾಡಿಕೊಂಡಿದ್ದ ಶಾಸ್ತ್ರಿಯವರು ಎಂದಿಗೂ ತಮ್ಮ ಅಧಿಕಾರವನ್ನು ದುರಪಯೋಗ ಮಾಡಿಕೊಳ್ಳಲಿಲ್ಲ. ಈ ಘಟನೆಯನ್ನು ಶಾಸ್ತ್ರಿಯವರ ಜನ್ಮದಿನದಂದು ಸ್ಮರಿಸಿದ ಹಿರಿಯ ಸ್ವಾತಂತ್ರ್ಯ ಯೋಧರೊಬ್ಬರು 'ಇಂತಹ ಸರಳ ಜೀವನ ಯಾರು ಬಾಳಿದ್ದಾರೆ' ಎಂದು ಉದ್ಗರಿಸಿದರು. ಹೌದು ಈಗ ಎಲ್ಲಿ ನೋಡಿದರೂ ಇಂತಹ ವ್ಯಕ್ತಿತ್ವವಿರುವ ವ್ಯಕ್ತಿಗಳು ಸಿಕ್ಕಾರೆಯೆ?



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!