ಸಂಪಾದಕೀಯ

ಗಿರಿಜನರ ಆಶಾಕಿರಣ ಅಚ್ಯುತ ಸಮಂತ

ಅಚ್ಯುತ ಸಮಂತ ಒಡಿಶಾದ ಒಂದು ಹಳ್ಳಿಯ ಹುಡುಗ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದ. ಕಿತ್ತುತಿನ್ನುವ ಬಡತನದಲ್ಲಿಯೇ ಕಷ್ಟಪಟ್ಟು ಓದಿ, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ. ಒಳ್ಳೆಯ ಉದ್ಯೋಗವೂ ದೊರೆಯಲು ಕಷ್ಟವಾಗುತ್ತಿರಲಿಲ್ಲ. ಆದರೆ ಕೆಲಸಕ್ಕೆ ಸೇರುವ ಬದಲು ತನ್ನಂತೆ ಕಷ್ಟದಲ್ಲಿರುವ ಗಿರಿಜನರ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ 1993 ರಲ್ಲಿ ಒಂದು ಶಾಲೆ ತೆರೆದ. 125 ಮಕ್ಕಳು ಸೇರಿದರು. ಅವರಿಗೆ ಉಚಿತ ಶಿಕ್ಷಣ ನೀಡಲು ಪ್ರಾರಂಭಿಸಿದ. ಅದಕ್ಕಾಗಿ ಅನೇಕರಿಂದ ಸಹಾಯ ಯಾಚಿಸಿದ. ಒಡಿಶಾದಲ್ಲಿ ಅತ್ಯಂತ ಹಿಂದುಳಿದ 62 ಗಿರಿಜನರ ಪಂಗಡಗಳು ಮತ್ತು 13 ಅತೀ ಹಿಂದುಳಿದ ಗಿರಿಜನರ ಪಂಗಡಗಳೂ ಇವೆ. ಇವರ ಮಕ್ಕಳು ಶಾಲೆಯ ಮುಖವನ್ನೇ ನೋಡದವರು. ಇಂತಹ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯನ್ನಿಟ್ಟುಕೊಂಡು   ಸ್ಥಾಪನೆಯಾದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌ಸ(ಕಿಸ್) ಇಂದು 20 ಸಾವಿರ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಈ ಎಲ್ಲ ಗಿರಿಜನರ ಮಕ್ಕಳಿಗೆ ಉಚಿತ ಊಟ, ವಸತಿ, ಬಟ್ಟೆ, ಪುಸ್ತಕಗಳನ್ನು ನೀಡಲಾಗುತ್ತಿದೆ. ಒಮ್ಮೆಲೇ ಒಂದು ಸಾವಿರ ಮಕ್ಕಳು ಕುಳಿತು ಊಟಮಾಡಲು ಅನುಕೂಲವಾಗುವಂತಹ ವಿಶಾಲ ಊಟದ ಮನೆ, 20 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ ಸುಸಜ್ಜಿತ ಪುಸ್ತಕ ಭಂಡಾರ, 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ,  600 ಮಕ್ಕಳು ಏಕಕಾಲದಲ್ಲಿ ಕಲಿಯಲು ಅನುಕೂಲವಾದ ಕಂಪ್ಯೂಟರ್ ಲ್ಯಾಬ್ ಎಲ್ಲವೂ ಇಲ್ಲಿದೆ. 80 ಎಕರೆ ಪ್ರದೇಶದಲ್ಲಿರುವ ಈ ವಿದ್ಯಾಸಂಸ್ಥೆ ವಿಶ್ವದಲ್ಲಿಯೇ ವಿಶಿಷ್ಟವಾದುದು. ಇಲ್ಲಿಗೆ ಅನೇಕ ದೇಶಗಳ ರಾಯಭಾರಿಗಳು, ಪ್ರಸಿದ್ಧ ಕೈಗಾರಿಕೋದ್ಯಮಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು, ನೊಬೆಲ್ ಪುರಸಕೃತ ಗಣ್ಯರೆಲ್ಲಾ ಆಗಮಿಸಿ, ಅಚ್ಯುತ ಅವರ ಕಾರ್ಯವನ್ನು ಮನಸಾರೆ ಶ್ಲಾಘಿಸಿದ್ದಾರೆ. ಕೆ.ಜಿ.ಯಿಂದ ಪಿ.ಜಿ.ವರೆಗೆ ಶಿಕ್ಷಣ ನೀಡುತ್ತಿದ್ದು ಒಂದರಿಂದ ಹತ್ತನೇ ತರಗತಿಯವರೆಗೆ 15,450 ಮಕ್ಕಳು, ಪದವಿಪೂರ್ವದ 1408 ಮಕ್ಕಳು, ಪದವಿ ಕಾಲೇಜಿನಲ್ಲಿ 1485 ಮಕ್ಕಳು, ಸ್ನಾತಕೋತ್ತರ ಪದವಿಯಲ್ಲಿ 229 ವಿದ್ಯಾರ್ಥಿಗಳು ಮತ್ತು ಇತರ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ 1535 ಗಿರಿಜನ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಇನ್ನೂ 20 ಕಡೆ ಇಂತಹ ಶಾಲೆಗಳನ್ನು ಪ್ರಾರಂಭಿಸಿ 2 ಲಕ್ಷ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯನ್ನು ಅಚ್ಯುತ ಸಮಂತ ಹೊಂದಿದ್ದಾರೆ. ಇದಕ್ಕೆಲ್ಲ ತಗಲುವ ವೆಚ್ಚವನ್ನು ದೇಣಿಗೆಗಳ ಮೂಲಕ, ತಾವೇ 350 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ಕೆಐಐಟಿ ವಿಶ್ವವಿದ್ಯಾನಿಲಯದಿಂದ ಮತ್ತು ಶ್ರೀಮಂತರಿಗಾಗಿ ಸ್ಥಾಪಿಸಿದ ಅಂತಾರಾಷ್ಟ್ರೀಯ ಮಟ್ಟದ ಶಾಲೆಯಲ್ಲಿ ಸಂಗ್ರಹವಾಗುವ ಹಣದಿಂದ ಭರಿಸಲಾಗುತ್ತಿದೆ. ಇವರ ವಿಶ್ವವಿದ್ಯಾನಿಲಯ ಭಾರತದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ 16ನೇ ಸ್ಥಾನ ಪಡೆದಿದಿದ್ದು ಅಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ದಿನಕ್ಕೆ ಹದಿನಾರು ಗಂಟೆಗಳ ಕಾಲ ಕೆಲಸ ಮಾಡುವ ಅಚ್ಯುತ ಅದಕ್ಕಾಗಿ 50 ಸಾವಿರ ರು. ವೇತನ ಪಡೆಯುತ್ತಾರಾದರೂ ಅದರಲ್ಲಿ 15 ಸಾವಿರ ರು.ಗಳನ್ನು ಮಾತ್ರ ತಮ್ಮ ಸ್ವಂತ ವೆಚ್ಚಕ್ಕಾಗಿ ಬಳಸಿಕೊಂಡು ಉಳಿದ ಹಣವನ್ನು ಬಡ ವಿದ್ಯಾರ್ಥಿಗಳ ನಿಧಿಗೆ ನೀಡುತ್ತಾರೆ. 48 ವರ್ಷದ ಅಚ್ಯುತ ಅವಿವಾಹಿತರು. ಇಂದಿಗೂ ಬ್ಯಾಂಕ್ ಖಾತೆ ಹೊಂದಿಲ್ಲ. ಸ್ವಂತ ಕಚೇರಿಯಿಲ್ಲದೆ ಒಂದು ಕದಂಬ ವೃಕ್ಷದ ಕೆಳಗೇ ಕುಳಿತು ವ್ಯವಹರಿಸುವ, ಸರಳತೆಯೇ ಮೂರ್ತಿವೆತ್ತಂತಹ ಅಪರೂಪದ ವ್ಯಕ್ತಿ ಅಚ್ಯುತ ಸಮಂತ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!