ವಿ. ಹೇಮಂತಕುಮಾರ, ಬೆಂಗಳೂರು, 9035992900
ಮೈಸೂರು ಹುಡುಗಿ ಮುತ್ತು ಕೊಡ್ತೀನಿ ಬಾರೋ ಅಂತ ಕರೀತಿದಾಳಲ್ಲ?
'ಮೈಸೂರೆ'ಗೊಳ್ಳುವಂತಹ ಅವಕಾಶ!
ಫ್ಯಾಷನ್ ಡಿಸೈನರ್ ಮಧು, 9945737427
ಒಂದು ಸಲ ಪ್ರೇಮದ ರುಚಿ, ರಾಜಕೀಯದ ರುಚಿ ಅನುಭವಿಸಿದವರು ಅದನ್ನು ಬಿಡುವುದಿಲ್ಲವಂತೆ?
ರುಚಿ ಸಿಕ್ಕರೆ ಐಸ್ಕ್ಯಾಂಡಿಯನ್ನೇ ಬಿಡಲಾಗುವುದಿಲ್ಲ. ಅಧಿಕಾರ, ಪ್ರೇಮ ಬಿಡೋದು ದೂರದ ಮಾತು.
ಲಿಂಗರಾಜು, ನಂಜನಗೂಡು, 9916021365
ರಾಜಕಾರಣಿಗಳು ಎಲ್ಲವನ್ನೂ ಸಹಿಸಿಕೊಂಡು, ನುಂಗಿಕೊಂಡು, ನಗುತ್ತಾ ಬಾಳುತ್ತಾರಲ್ಲ?
ಅವರು ನುಂಗಿಕೊಂಡಿದ್ದೆಷ್ಟು ಎಂದು ಲೆಕ್ಕಹಾಕಲು ಸಾಧ್ಯವಿಲ್ಲ ಬಿಡಿ!
ಚಿರಪ್ರಭ, ನಂಜನಗೂಡು, 8553793107
ಮೋದಿ ಪ್ರಧಾನಿಯಾದರೂ ನಾನು ದೇಶಬಿಟ್ಟು ಹೋಗುವುದಿಲ್ಲ ಅಂತಿದಾರಲ್ಲ ಅ.ಮೂ?
ಮೋದಿ ಪ್ರಧಾನಿಯಾಗುವುದು ಪಕ್ಕಾ ಅಂತ ಹೇಳುತ್ತಿದ್ದಾರಲ್ಲಾ ಚಿ.ಮೂ!
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹೆಣ್ಣಿಗೆ ಸೌಂದರ್ಯವೇ ಮಾನದಂಡ. ಗಂಡಿಗೆ?
ಅವಳ ಸೌಂದರ್ಯದಿಂದಲೇ ಮಾನ 'ದಂಡ'!
ಬಾಣಭಟ್ಟ