ಸಂಪಾದಕೀಯ

ಕೇಜ್ರಿವಾಲ್‌ಗೆ ಮೊದಲು ಹೂವಿನ ಹಾರ ಹಾಕಿ ನಂತರ ಕಪಾಳಮೋಕ್ಷ ಮಾಡಿದ್ದು ಯಾಕೆ?

ಆರ್.ಸಿ. ಪರಶುರಾಮ, 9902203492
ಕೇಜ್ರಿವಾಲ್‌ಗೆ ಮೊದಲು ಹೂವಿನ ಹಾರ ಹಾಕಿ ನಂತರ ಕಪಾಳಮೋಕ್ಷ ಮಾಡಿದ್ದು ಯಾಕೆ?
ಕುರಿ ಕಡಿಯುವ ಮೊದಲು ಅದಕ್ಕೆ ಚೆನ್ನಾಗಿ ತಿನ್ನಲುಕೊಟ್ಟು ಕೊಬ್ಬಿಸುತ್ತಾರೆ!

ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಬದುಕನ್ನು ಜಟಕಾ ಬಂಡಿಗೆ ಹೋಲಿಸುತ್ತಾರಲ್ಲ ಯಾಕೆ?
ಆ ಹೋಲಿಕೆ ಹುಟ್ಟಿಕೊಂಡಾಗಿನ್ನೂ ಬೆಂಝ್ ಕಾರು ಬಂದಿರಲಿಲ್ಲ!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನೀರಿನ ಸಾಗರ ದಾಟಲು 'ತೆಪ್ಪ'ಬೇಕು. ಸಂಸಾರ ಸಾಗರ ದಾಟಲು?
'ತೆಪ್ಪ'ಗಿರಬೇಕು!

ಎಂ. ನಾಗೇಶ್, ಕುಣಿಗಲ್, 9746815303
ಪ್ರೀತಿ ಹೃದಯದ ಭಾಷೆಯೋ? ಇಲ್ಲ ಮೆದುಳಿನ ಭಾಷೆಯೋ?
ಮೆದುಳಿನಿಂದ ಹೃದಯಕ್ಕಿಳಿಯುವ ಭಾಷೆ!

ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಗುಜರಾತ್‌ನ ಮೋದಿಗಿಂತ ತಮಿಳುನಾಡಿನ ಈ ನಾರಿ ಗುಡುಗಿದ್ದಾಳಲ್ಲ?
ಈ ನಾರಿ ಕಾವೇರಿಗೆ ಸದಾ ಮಾರಿ!


- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!