ಸಂಪಾದಕೀಯ

ದುರ್ಬುದ್ಧಿ

    ಅವಿವೇಕದ ಆಲಾಪ
    ಅಜ್ಞಾನದ ಪ್ರಲಾಪ
    ಮೌಢ್ಯದ ಕಲಾಪ (ಸಮೂಹ)
    ಆಚಾರದ ಲೋಪ ಮತ್ತು ವಿಚಾರವಿಲ್ಲದ ಕೋಪ
    ಅಸೂಯಾಳ ಸಹೋದರಿ
    ಲೋಭದ ಪ್ರಲೋಭನೆ
    ಬುದ್ಧಿಗಿಂತ ಹೆಚ್ಚು ಸದ್ದು ಮಾಡುವ ಲದ್ದಿ
    ತಾನು ಇಷ್ಟಪಡುವವರನ್ನು ಬೇರೆಯವರು ಇಷ್ಟಪಟ್ಟರೆ ಕಷ್ಟಕೊಡುವ ಬುದ್ಧಿ
    ಪ್ರಜೆಗಳ ಹಣವನ್ನು ಮಜಾ ಉಡಾಯಿಸಲೆಂದೇ ಇರುವುದೆಂದು ಭಾವಿಸುವ ಬುದ್ಧಿ
    ಸುದ್ದಿಯಾಗಬೇಕೆಂದು ಸುಳ್ಳು ಸುಳ್ಳು ಸುದ್ದಿ ಹರಡಿಸಿ ಸದ್ದು ಮಾಡುವ ಕುಬುದ್ಧಿ
    ಶಕ್ತಿ ಇಲ್ಲದಿದ್ದರೂ ಕುಯುಕ್ತಿಗಳ ಮೂಲಕವೇ ಶಕ್ತರನ್ನು ಬಗ್ಗು ಬಡಿಯುವ ಹುನ್ನಾರ
    ಮೀಸಲಾತಿಯ ಮೂಲಕ ದುರ್ಬಲರ ಓಟನ್ನು ತಮಗೇ ಮೀಸಲಾಗಿಸಿಕೊಳ್ಳುವ ಮೋಸ ಬುದ್ಧಿ
    ತಮಗಾಗದವರಿಗೆ ಕಷ್ಟ ಕೊಡುವ ದುಷ್ಟ ಬುದ್ಧಿ
    ತಮ್ಮಿಷ್ಟದಂತೆಯೇ ಎಲ್ಲವೂ ನಡೆಯಬೇಕು, ಇಲ್ಲದಿದ್ದರೆ ನಡೆಯಲು ಬಿಡುವುದಿಲ್ಲ ಎನ್ನುವ ಅನಿಷ್ಟ ಬುದ್ಧಿ
    ಉಚ್ಛ ನೀಚವೆಂಬ ಭೇದ ಭಾವವನ್ನು ಹುಟ್ಟಿಸುವ ನೀಚ ಬುದ್ಧಿ
    ಸ್ವಲ್ಪವೂ ಕರುಣೆಯಿಲ್ಲದ ಅಲ್ಪತನದ ಬುದ್ಧಿ
    ಕೌರವರ ನಾಶಕ್ಕೆ ಕಾರಣವಾದ ರೌರವ ಬುದ್ಧಿ
    ಸದ್ಬುದ್ಧಿ ಸತ್ತವರನ್ನು ಬದುಕಿಸುತ್ತದೆ. ದುರ್ಬುದ್ಧಿ ಬದುಕಿರುವವರ ಜೊತೆಗೆ ಸತ್ತವರನ್ನೂ ಎಳೆತಂದು ಕೊಲ್ಲುತ್ತದೆ



-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!