ಸಂಪಾದಕೀಯ

ಶಿಷ್ಯವಾತ್ಸಲ್ಯವೆಂದರೆ ಇದು

ಎ.ಆರ್.ಕೃಷ್ಣಶಾಸ್ತ್ರಿಗಳು ಕನ್ನಡದ ಒಬ್ಬ ಶ್ರೇಷ್ಠ ಪ್ರಾಧ್ಯಾಪಕರಾಗಿ, ಲೇಖಕರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಉಳ್ಳವರಾಗಿ ಹೆಸರು ಮಾಡಿದ್ದಾರೆ. ಅತ್ಯಂತ ಬಡಕುಟುಂಬದಿಂದ ಬಂದವರಾದ್ದರಿಂದ ಅವರಿಗೆ ಕಷ್ಟ-ಸುಖಗಳ ಅರಿವಿತ್ತು. ಕನ್ನಡವಲ್ಲದೆ, ಇಂಗ್ಲಿಷ್, ಬೆಂಗಾಲಿ, ಪಾಲಿ, ಜರ್ಮನ್, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಪರಿಣತಿ ಪಡೆದಿದ್ದರು. ಅವರ ವಚನ ಭಾರತ, ನಿರ್ಮಲಭಾರತ ಮತ್ತು ಕಥಾಮಿತ್ರ ಅತ್ಯಂತ ಪ್ರಸಿದ್ಧ ಕೃತಿಗಳಾಗಿವೆ. ಅಠಾರಾ ಕಚೇರಿಯ ಗುಮಾಸ್ತರಾಗಿ ಕೆಲಸಕ್ಕೆ ಸೇರಿ, ನಂತರ ಸ್ನಾತಕೋತ್ತರ ಪದವಿ ಗಳಿಸಿ ಅಧ್ಯಾಪಕ ವೃತ್ತಿಯನ್ನು ಕೈಗೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದಾಗ ನಡೆದ ಒಂದು ಘಟನೆಯನ್ನು ಡಾ.ಕೆ.ಎಂ. ಕೃಷ್ಣರಾವ್ ಎನ್ನುವವರು "ಶಾಸ್ತ್ರಿಗಳ ಶಿಷ್ಯವಾತ್ಸಲ್ಯ" ಎಂಬ ಲೇಖನದಲ್ಲಿ ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ: ಅಂತಿಮ ಆನರ್ಸ್ ಪರೀಕ್ಷೆಗೆ ಪರೀಕ್ಷಾ ಶುಲ್ಕ ಕಟ್ಟಲು ಇನ್ನೇನು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಎಲ್ಲ ವಿದ್ಯಾರ್ಥಿಗಳೂ ಹಣ ಕಟ್ಟಿದ್ದಾರೆ. ಆದರೆ ಒಬ್ಬ ವಿದ್ಯಾರ್ಥಿಯ ಪತ್ತೆಯಿಲ್ಲ. ಅವನು ಪರೀಕ್ಷಾ ಶುಲ್ಕ ಕಟ್ಟಿಲ್ಲ. ಇದು ಶಾಸ್ತ್ರಿಯವರ ಗಮನಕ್ಕೆ ಬಂತು. ಕೂಡಲೇ ಆತನನ್ನು ಕರೆತರಲು ಶಾಸ್ತ್ರಿಗಳು ಹೇಳಿಕಳುಹಿಸಿದರು. ಕೊನೆಗೆ ಅವನು ಓಡಾಡುವ ಸ್ಥಳಗಳಲ್ಲೆಲ್ಲಾ ತಡಕಾಡಿ ಅಂತೂ ಪತ್ತೆಮಾಡಿ ಅವನನ್ನು ಕೃಷ್ಣಶಾಸ್ತ್ರಿಗಳ ಬಳಿ ಕರೆತರಲಾಯಿತು. ಬಂದವನೇ ತನ್ನಲ್ಲಿ ಹಣವಿಲ್ಲವಾದ್ದರಿಂದ ಪರೀಕ್ಷೆ ಕಟ್ಟುವುದಿಲ್ಲವೆಂದು ಹಠಹಿಡಿದು ಕುಳಿತ. ಆದರೆ ಶಾಸ್ತ್ರಿಗಳು ಸ್ವಲ್ಪ ಗಡುಸಾಗಿ, ಪ್ರೀತಿಬೆರೆತ ಮಾತಿನಲ್ಲಿ "ಹಣವಿಲ್ಲವೆಂದು ಪರೀಕ್ಷೆಗೆ ಕುಳಿತುಕೊಳ್ಳದೆ, ಕಾಲೇಜಿಗೂ ಬರದೆ ತಿರುಗಿಕೊಂಡಿದ್ದರಾದೀತೆ? ತರಗತಿಗೆ ಚಕ್ಕರ್ ಹಾಕಿದರೆ ಬಂದ ಭಾಗ್ಯವೇನು? ನಾವೆಲ್ಲ ಇರುವುದ್ಯಾತಕ್ಕೆ? ಪರೀಕ್ಷೆ ಶುಲ್ಕವೆಷ್ಟು?" ಎಂದು ವಿಚಾರಿಸಿದರು. ಆ ವಿದ್ಯಾರ್ಥಿಯೋ ತುಂಬಾ ಸ್ವಾಭಿಮಾನಿ. ಸಹಾಯಪಡೆದು ಪರೀಕ್ಷೆ ಬರೆಯುವುದಿಲ್ಲವೆಂದು ಹಠ ಹಿಡಿದ. ಕೊನೆಗೆ ಶಾಸ್ತ್ರಿಗಳು ತಮ್ಮ ಜೇಬಿನಿಂದ ಚೆಕ್ ಪುಸ್ತಕ ತೆಗೆದು ಅದರಲ್ಲಿ ಒಂದುನೂರು ರುಪಾಯಿಗೆ ಚೆಕ್ ಬರೆದು ಆ ವಿದ್ಯಾರ್ಥಿಗೆ ಕೊಡುತ್ತಾ, "ನಿನಗೆ ನನ್ನಿಂದ ಧರ್ಮಾರ್ಥವಾಗಿ ಹಣ ಪಡೆಯಲು ಇಷ್ಟವಿಲ್ಲದೆ ಹೋದರೆ ಚಿಂತೆಯಿಲ್ಲ. ಇದನ್ನು ಸಾಲ ಅಂತ ತಗೋ. ಪರೀಕ್ಷೆ ಪಾಸುಮಾಡಿ ಕೆಲಸ ಸಿಕ್ಕ ಮೇಲೆ ನನಗೆ ಈ ಹಣವನ್ನು ಹಿಂದಕ್ಕೆ ಕೊಡು. ಈಗಲೇ ಹೋಗಿ ಪರೀಕ್ಷೆಗೆ ಕಟ್ಟಬೇಕು. ಓದುವುದಕ್ಕೆ ಇನ್ನೂ ಕಾಲಾವಕಾಶ ಇದೆ. ನಾಳೆ ಬಂದು ಹಣಕಟ್ಟಿದ್ದಕ್ಕೆ ರಸೀದಿ ತೋರಿಸಬೇಕು. ತಿಳೀತೆ? ಸರಿ, ಹೋಗು!" ಎಂದು ನಗುನಗುತ್ತಾ ಬೀಳ್ಕೊಟ್ಟರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!