ಸಂಪಾದಕೀಯ

ಭಾಷಾಪ್ರೇಮ ಮೆರೆದ ಸೀತಾರಾಮಯ್ಯ

ಪಟ್ಟಾಭಿ ಸೀತಾರಾಮಯ್ಯನವರ ಹೆಸರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಮದ್ರಾಸು ಕ್ರಿಶ್ಚಿಯನ್ ಕಾಲೇಜಿನಲ್ಲಿ ಓದಿ ವೈದ್ಯರಾಗಿ. ತಮ್ಮ ವೈದ್ಯವೃತ್ತಿಯನ್ನು ಮಚಲೀಪಟ್ಟಣದಲ್ಲಿ ಪ್ರಾರಂಭಿಸಿದರು. ಆದರೆ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಪ್ರತ್ಯೇಕ ಆಂಧ್ರಕ್ಕಾಗಿ ಹೋರಾಟ ನಡೆಸಿದವರಲ್ಲಿ . ಅವರು ಪ್ರಥಮರು. 1918 ರಲ್ಲಿಯೇ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರತ್ಯೇಕ ಆಂಧ್ರ ಪ್ರದೇಶಕ್ಕಾಗಿ ಬೇಡಿಕೆ ಸಲ್ಲಿಸಿದರು. 1939 ರಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷತೆಗೆ ಪೈಪೋಟಿ ನಡೆದಾಗ ಗಾಂಧೀಜಿ ಪಾಳಯದ ಅಭ್ಯರ್ಥಿಯಾಗಿ ಸುಭಾಷ್ ಚಂದ್ರ ಭೋಸರ ವಿರುದ್ಧ ಸ್ಪರ್ಧಿಸಿ ಸೋತರು. ಮಚಲೀಪಟ್ಟಣದಲ್ಲಿ ಆಂಧ್ರ ಬ್ಯಾಂಕ್ ಸ್ಥಾಪಿಸಿದರು. ಅದು ಮುಂದೆ ದೊಡ್ಡದಾಗಿ ಬೆಳೆದು ರಾಷ್ಟ್ರೀಕೃತ ಬ್ಯಾಂಕ್ ಆಯಿತು. ಅಲ್ಲದೆ ಅವರು ಹಿಸ್ಟರಿ ಆಫ್ ಕಾಂಗ್ರೆಸ್, ಗಾಂಧಿ ಮತ್ತು ಗಾಂಧಿಸಂ ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ, ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಸ್ವಾತಂತ್ರ್ಯಾ ನಂತರ ರಾಜ್ಯಸಭೆ ಸದಸ್ಯರಾಗಿ, ಮಧ್ಯಪ್ರದೇಶದ ರಾಜ್ಯಪಾಲರಾಗಿ ಸಹ ಸೇವೆ ಸಲ್ಲಿಸಿದರು. ಮಚಲೀಪಟ್ಟಣದಲ್ಲಿ ನೆಲೆಸಿದ್ದಾಗ ಅವರು ಬರೆಯುತ್ತಿದ್ದ ಪತ್ರಗಳ ಮೇಲೆ ಪರಕೀಯರ ಇಂಗ್ಲಿಷ್ ಬದಲಿ, ಹಿಂದಿಯಲ್ಲಿ ವಿಳಾಸ ಬರೆಯುತ್ತಿದ್ದರು. ಆದರೆ ದಕ್ಷಿಣ ಭಾರತದ ಅಂಚೆ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಬಹುತೇಕ ಸಿಬ್ಬಂದಿಗೆ ಹಿಂದಿ ಭಾಷೆಯ ಪರಿಚಯವೇ ಇರುತ್ತಿರಲಿಲ್ಲ. ಹೀಗಾಗಿ ಸೀತಾರಾಮಯ್ಯನವರು ಬರೆದ ಪತ್ರಗಳನ್ನು ವಿಂಗಡಿಸಲು ಕಷ್ಟವಾಗುತ್ತಿತ್ತು. ಈ ಕಾರಣಕ್ಕೆ ಅಂಚೆ ಇಲಾಖೆ ಸೀತಾರಾಮಯ್ಯನವರಿಗೆ ಒಂದು ಪತ್ರ ಬರೆದು, ಅಂಚೆ ಪತ್ರದ ಮೇಲೆ ಇನ್ನು ಮುಂದೆ ಇಂಗ್ಲಿಷಿನಲ್ಲಿ ವಿಳಾಸ ಬರೆಯಲು ಮನವಿ ಮಾಡಿಕೊಂಡಿತು. ಆದರೆ ಸೀತಾರಾಮಯ್ಯನವರು ಅದಕ್ಕೆ ಸೊಪ್ಪುಹಾಕದೆ, ಹಿಂದಿಯನ್ನು ಬಳಸುವುದನ್ನು ಮಾತ್ರ ಬಿಡಲಿಲ್ಲ. ಕೊನೆಗೆ ಬೇಸತ್ತ ಅಂಚೆ ಇಲಾಖೆ, ಇನ್ನು ಮುಂದೆ ಹಿಂದಿಯಲ್ಲಿ ಬರೆದ ಪತ್ರಗಳನ್ನು ಡೆಡ್ ಲೆಟರ್ ಕಛೇರಿಗೆ ಕಳುಹಿಸಲಾಗುತ್ತದೆಂದು ಎಚ್ಚರಿಕೆ ನೀಡಿದರು. ಆದರೆ ಪಟ್ಟಾಭಿ ಸೀತಾರಾಮಯ್ಯನವರು ಅದಕ್ಕೆಲ್ಲಾ ಅಂಜದೆ, ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದೆ. ಆದ್ದರಿಂದ ನನ್ನೆಲ್ಲ ಪತ್ರ ವ್ಯವಹಾರಗಳಲ್ಲಿ ಹಿಂದಿಯನ್ನೇ ಬಳಸುತ್ತೇನೆ. ಅದನ್ನು ತಡೆಯಲು ಅಂಚೆ ಇಲಾಖೆಗೆ ಅಧಿಕಾರವಿಲ್ಲವೆಂದು ಖಾರವಾಗಿ ಪ್ರತಿಕ್ರಿಯಿಸಿದರು. ಹೀಗಾಗಿ ಅನಿವಾರ್ಯವಾಗಿ ಮಚಲೀ ಪಟ್ಟಣದ ಅಂಚೆ ಇಲಾಖೆ ಸೀತಾರಾಮಯ್ಯನವರಿಗೋಸ್ಕರವೇ ಒಬ್ಬ ಹಿಂದಿ ಅರಿತಿರುವ ತಜ್ಞನನ್ನು ನೇಮಿಸಿಕೊಳ್ಳಬೇಕಾಯಿತು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!