ಕೆಲವರ ಮೂಗಿನ ತುದಿಯಲ್ಲಿರುವ ಆಭರಣ
ಹಸಿ ಹಸಿ ಜೀವವನ್ನೇ ಸುಟ್ಟು ಹಾಕುವ ಅಂತರಗ್ನಿ ಈ ಸಿಟ್ಟು
ಇದರ ಕೈಯ್ಯಲ್ಲಿ ಕೊಟ್ಟರೆ ಜುಟ್ಟು, ಕೊಡದಿದ್ದೀತೆ ಪೆಟ್ಟು?
ಮನಮೋಹನರಿಗೆ ಇಲ್ಲದ್ದು. (ಅವರು ಸಿಟ್ಟು, ಸಿಡುಕು, ಮಾತು ಮೂರೂ ಬಿಟ್ಟವರು)
ಬರಬೇಕಾದವರು ತುಂಬ ಹೊತ್ತಾದರೂ ಬಾರದಿದ್ದಾಗ ಅವರ ಬದಲು ಬರುವಂಥದ್ದು
ನಂಬಿದರೆ ಇದರನ್ನ, ಕಸಿದೀತು ನಿಮ್ಮ ಅನ್ನ
ಬಾಸ್ಗೆ ಇರಬೇಕಾದ್ದು. ಗಂಡನಿಗೆ ಇರಬಾರದ್ದು
ಹೆಂಡತಿಗೆ ಇರಬೇಕೋ ಬೇಡವೋ ಎಂದು ಮೇಲಿನ ವಾಕ್ಯದಲ್ಲಿಯೇ ತಿಳಿಸಲಾಗಿದೆ
ಕಷ್ಟದ ಕೂಪಕ್ಕೆ ತಳ್ಳುವ ಕೋಪ
ಕಾದ ಮನಸ್ಸಿನ ಪ್ರತಿಕ್ರಿಯೆ ಈ ಕ್ರೋಧ
ಸೂಟು ಬೂಟು ಹಾಕಿದವರು ಮೆರೆವ ಘನತೆ
ಸಿಟ್ಟು ಬಿಟ್ಟು ಕೊಟ್ಟರೆ ಮಾತ್ರ ಜೀವನ ಪಟ್ಟಾಗಿರುವುದು
ಸಿಟ್ಟು ಎಂಬ ಗುಣ ಸುಟ್ಟರೂ ಹೋಗುವುದಿಲ್ಲ
ಎದುರು ಸಿಟ್ಟು ಇರುವವರು ಸಿಟ್ಟಿನ ಎದುರೇ ಸೋಲುತ್ತಾರೆ
ವ್ಯಕ್ತಿತ್ವವನ್ನು ಸೊಟ್ಟಗಾಗಿಸುವ ಕೆಟ್ಟ ಗುಣ
-ವಿಶ್ವನಾಥ ಸುಂಕಸಾಳ
ಢ್ಝಝಢಿಛಡ್ಡಟ್ಞಿಛಡಛಟಅಣಝ್ಟ್ಟ.್ಛ್ಟಟ