ಸಂಪಾದಕೀಯ

ಜನನ

ಹೊಸ ದೇಹ ತೊಟ್ಟು ಮತ್ತೆ ಒದಗುವ ಹುಟ್ಟು
    ಮಗನ ಜನನವೆಂದರೆ ಅದು ಜನನಿಯ ಜನನವೂ ಹೌದು
    ಜನೋತ್ಪತ್ತಿ
    ಸಾವಿಗೆ ಪ್ರಥಮ ಕಾರಣ
    ಬರ್ತ್ ಡೇ ಪಾರ್ಟಿಗಳ ಹುಟ್ಟಿಗೆ ಕಾರಣವಾದದ್ದು
    ಸುತ್ತಲಿನವರೆಲ್ಲಾ ನಗುವ, ಜನಿಸಿದವ ಮಾತ್ರ ಅಳುವ ಸಂದರ್ಭ
    ತಂದೆ ತಾಯಿಗಳ ಪಾಲಿನ ತನನ...
    ವಿವಾಹದ ಉದ್ದೇಶಗಳಲ್ಲಿ ಸಜ್ಜನ ಜನನವೂ ಒಂದು
    ಜಗ, ಜಗಜಗಿಸಲು ಜನ ಜನನದ ಝಂಝಾರವವೂ ಕಾರಣ...
    ಬದುಕು (ಕಷ್ಟಗಳನ್ನು ನೀಡಿ) ನಮ್ಮನ್ನು ತದುಕುವ ಮೂಲಕ ಹುಟ್ಲಿಲ್ಲಾ ಅನ್ನಿಸುತ್ತದೆಯಲ್ಲಾ ಅದಕ್ಕೆ ಕಾರಣವಾದದ್ದು ಈ ಹುಟ್ಟು
    ನಾವು ಯಾಕೆ ಜನಿಸುತ್ತೇವೆಂಬುದು ಯಾರಿಗೂ ಗೊತ್ತಿಲ್ಲ. ಹೇಗೆಂಬುದು ಮಾತ್ರ ಯಾರೂ ಹೇಳಬೇಕಾದದ್ದೇ ಇಲ್ಲ
    ಸೆಕೆಂಡಿಗೆಷ್ಟೋ ಜನ ಜನಿಸುತ್ತಾರೆ. ಅಂದರೆ ಮಾನವನ ಪ್ರಮುಖ ಉತ್ಪನ್ನ ಯಾವುದೆಂಬುದು ತಿಳಿಯುತ್ತದೆ
    ದ್ವಿಜರೆನಿಸಿಕೊಳ್ಳುವುದು ಸುಲಭ. ಅಜರಾಗುವುದು ಕಷ್ಟ
    ಮೋಕ್ಷದ ತನಕ ಜನನ ಕ್ರಮಕ್ಕೆ ಸಾವಿಲ್ಲ. ಅದಕ್ಕೇ ಪುನರಪಿ ಜನನಂ....


ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ