ಬೇಗಂಗೆ ಆಗಿಬಾರದ ಶಬ್ದ
ತಡವಾದಾಗ ತಡವರಿಸಿದರೆ ಜೊತೆಗಾರರು ಇದನ್ನೇ ಹೇಳುತ್ತಾರೆ
ಬೇಗ ಬೇಗನೇ ಕೆಲಸ ಮುಗಿಸಿದ ಮಾತ್ರಕ್ಕೆ ಬೇಗ ಮನೆಗೆ ಹೋಗಲಾಗುವುದಿಲ್ಲ. ಹಾಗಾಗಿ ಕಚೇರಿಯಲ್ಲಿ ನಿಧಾನವೇ ಪ್ರಧಾನ
ಕೆಲಸ ಬೇಗನೇ ಮುಗಿಸಿದರೆ ಸಿಗುವ ಬಹುಮಾನಕ್ಕೆ ಮತ್ತೊಂದು ಕೆಲಸ ಎನ್ನಬಹುದು
ಎಷ್ಟೇ ಬೇಗ ಎಂದರೂ ಕೆಲವೊಂದಷ್ಟಕ್ಕೆ ಒಂಭತ್ತು ತಿಂಗಳು ಕಾಯಲೇಬೇಕು
ಮನೆಗೆ ಬಂದ ನೆಂಟರು ಹೊರಡುವ ವಿಚಾರದಲ್ಲಿ ನಮ್ಮ ಮನಸ್ಸು ಹೇಳುವುದು ಇದನ್ನೇ
ಬಟ್ಟೆ ಅಂಗಡಿಗೆ ಹೋದಾಗ ಹೆಂಡತಿಗೆ ಗಂಡ ಮತ್ತು ಆಫೀಸಿಗೆ ಹೋದಾಗ ಗಂಡನಿಗೆ ಹೆಂಡತಿ ಹೇಳುವ ಮಾತಿದು
ಹೆಂಡತಿ ಜೊತೆಗೆ ಮನೆಯೊಳಗಿದ್ದರೆ ಸಮಯ ಬೇಗನೇ ಕಳೆಯುತ್ತದೆ. ಹೆಂಡತಿ ಜೊತೆಗೆ ಅಂಗಡಿಯೊಳಗಿದ್ದರೆ ಸಮಯ ಹಾಗೇ ಕೊಳೆಯುತ್ತದೆ
ಆತುರಗಾರನ ತರಾತುರಿ
ತೀವ್ರಗಾಮಿಗಳ ಮೂಲಮಂತ್ರ
ಮಂದಗಾಮಿಗಳ ಸೋಲಿಸುವ ತಂತ್ರ
ಸರ್ಕಾರೀ ಕಚೇರಿ, ಸರ್ಕಾರಿ ಯೋಜನೆ ಮತ್ತು ನ್ಯಾಯಾಂಗ ವ್ಯವಸ್ಥೆಗಳಿಗೆ ಅನ್ವಯಿಸದ ಶಬ್ದ
ವೇಗದ ಪರಿಣಾಮವೇ ಬೇಗ
ಶೀಘ್ರವಾದ ಕಾತುರ ಹೊರಡಿಸುವ ಶಬ್ದ
ಬಿಪಿಯೆಂಬ ರೋಗಕ್ಕೆ, ಅನಗತ್ಯ ಬೇಗ ಎನ್ನುವುದೇ ಕಾರಣ
ಗಡಿಬಿಡಿತನದ ಲಕ್ಷಣ
-ವಿಶ್ವನಾಥ ಸುಂಕಸಾಳ
vishwasunkasal@yahoo.com